ಶ್ರದ್ಧಾ ಕಪೂರ್, ರಾಜಕುಮಾರ್ ಸ್ತ್ರೀ ಭರ್ಜರಿ ಕಲೆಕ್ಷನ್: 2 ವಾರದಲ್ಲಿ ಎಷ್ಟು ಕಲೆಕ್ಷನ್?

ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್‍ಕುಮಾರ್ ಅಭಿನಯದ ಸ್ತ್ರೀ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಎರಡೇ ವಾರದಲ್ಲಿ 82.29 ಕೋಟಿ ರೂ. ಹಣ ಸಂಗ್ರಹಿಸಿದೆ.

ಎರಡು ವಾರದಲ್ಲಿ ಒಟ್ಟು 82.08 ಕೋಟಿ ರೂ. ಹಣ ಕಲೆಕ್ಷನ್ ಮಾಡಿದ್ದು, ನೂರು ಕೋಟಿ ಕಲೆಕ್ಷನ್‍ನತ್ತ ದಾಪುಗಾಲು ಇಡುತ್ತಿದೆ ಎಂದು ಚಲನ ಚಿತ್ರ ಮಾರುಕಟ್ಟೆ ವಿಶ್ಲೇಷಕ ತರುಣ್ ಅದರ್ಶ್ ಟ್ವೀಟ್ ಮಾಡಿದ್ದಾರೆ.

ಮೊದಲ ವಾರದಲ್ಲಿ ಒಟ್ಟು 60.39 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸ್ತ್ರೀ ಎರಡನೇ ವಾರಾಂತ್ಯದಲ್ಲಿ ಒಟ್ಟು 21.90 ಕೋಟಿ ರೂ. ಶುಕ್ರವಾರ 4.39 ಕೋಟಿ ರೂ. ಶನಿವಾರ 7.63 ಕೋಟಿ ರೂ. ಮತ್ತು ಭಾನುವಾರ 9.88 ಕೋಟಿ ರೂ. ಒಟ್ಟು 82.29 ಕೋಟಿ ರೂ. ಪಡೆದು 100 ಕೋಟಿ ರೂ. ನತ್ತ ಹೆಜ್ಜೆ ಇಡುತ್ತಿದೆ.

ಸ್ತ್ರೀ ಹಾರರ್ ಸಿನಿಮಾವಾಗಿದ್ದು, ಕಾಮಿಡಿಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರಾಜ್‍ಕುಮಾರ್ ರಾವ್, ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಪಂಕಜ್ ತ್ರಿಪಾಠಿ, ಅಪಾರಶಕ್ತಿ ಖುರಾನ ಮತ್ತು ಅಭಿಷೇಕ್ ಬ್ಯಾನರ್ಜಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ನಗರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ನಾಳೆ ಬಾ (ದೆವ್ವ, ಭೂತ ಮನೆಯೊಳಗೆ ಪ್ರವೇಶಿಸುವುದನ್ನು ತಟ್ಟುವುದನ್ನು ಬಾಗಿಲ ಮೇಲೆ ಬರೆಯುವ) ನಂಬಿಕೆ ಕುರಿತ ಸಂಗತಿಗೆ ಈ ಚಿತ್ರದಲ್ಲಿ ಕಾಮಿಡಿ ಸ್ಪರ್ಶ ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *