ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ

ಕುಲ್ಫಿ ಎಂದಕೂಡಲೇ ಎಲ್ಲರೂ ತಮ್ಮ ಬಾಲ್ಯವನ್ನು ನೆನೆಯುತ್ತಾರೆ. ರಸ್ತೆ ಬದಿಯಲ್ಲಿ ಇಲ್ಲವೇ ಊರಿಂದೂರಿಗೆ ತಳ್ಳುಗಾಡಿಯಲ್ಲಿ ಅಥವಾ ಸೈಕಲ್‌ನಲ್ಲಿ ಕುಲ್ಫಿ ಮಾರುವುದು ಇಂದಿಗೂ ಇದೆ. ತಣ್ಣನೆಯ ಹಾಗೂ ಸಿಹಿಯಾದ ಕುಲ್ಫಿ ಇಷ್ಟಪಡದವರು ಯಾರೂ ಇಲ್ಲ. ಇಂದು ನಾವು ತಂಪಾದ, ಆರೋಗ್ಯಕ್ಕೂ ಹಿತವೆನಿಸುವ ಸ್ಟ್ರಾಬೆರಿ ಓಟ್ಸ್ ಕುಲ್ಫಿ (Strawberry Oats Kulfi) ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ನೀವಿದನ್ನು ಮನೆಯಲ್ಲಿ ಮಾಡಿ, ಬಾಲ್ಯವನ್ನು ಮತ್ತೆ ಮೆಲುಕುಹಾಕಿ.

ಬೇಕಾಗುವ ಪದಾರ್ಥಗಳು:
ಓಟ್ಸ್ – ಒಂದೂವರೆ ಕಪ್
ಬೆಲ್ಲ – 3 ಟೀಸ್ಪೂನ್
ಜೇನುತುಪ್ಪ – 1 ಟೀಸ್ಪೂನ್
ಹಾಲು – ಒಂದೂವರೆ ಕಪ್
ಸ್ಟ್ರಾಬೆರಿ – 10
ಕತ್ತರಿಸಿದ ಬಾದಾಮಿ – 5
ಕತ್ತರಿಸಿದ ಪಿಸ್ತಾ – 5
ಕೇಸರಿ – ಚಿಟಿಕೆ (2 ಟೀಸ್ಪೂನ್ ಬೆಚ್ಚನೆಯ ಹಾಲಿನಲ್ಲಿ ನೆನೆಸಿಡಿ) ಇದನ್ನೂ ಓದಿ: ರಿಫ್ರೆಶ್ ಅನುಭವಕ್ಕೆ ಮಾಡಿ ಸವಿಯಿರಿ ಮಸಾಲಾ ಪೈನಾಪಲ್ ಡ್ರಿಂಕ್

ಮಾಡುವ ವಿಧಾನ:
* ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ, ಓಟ್ಸ್ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿಯಿರಿ.
* ಬಳಿಕ ಅದನ್ನು ತಣ್ಣಗಾಗಿಸಿ, ಮಿಕ್ಸರ್ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿ ಪಕ್ಕಕ್ಕಿಡಿ.
* ಸ್ಟ್ರಾಬೆರಿಗಳನ್ನು ಸ್ವಚ್ಛಗೊಳಿಸಿ, ಅದರ ತೊಟ್ಟನ್ನು ಬೇರ್ಪಡಿಸಿ. ಬಳಿಕ ಸ್ಟ್ರಾಬೆರಿಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಪ್ಯೂರಿ ತಯಾರಿಸಿಡಿ.
* ಈಗ ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಬಳಿಕ ಪುಡಿ ಮಾಡಿದ ಓಟ್ಸ್, ಬೆಲ್ಲ, ಜೇನುತುಪ್ಪ, ಬಾದಾಮಿ, ಪಿಸ್ತಾ ಸೇರಿಸಿ, ಮಿಶ್ರಣ ಮಾಡಿ.
* ಉರಿಯನ್ನು ಮಧ್ಯಮದಲ್ಲಿಟ್ಟು, 4-5 ನಿಮಿಷ ಕುದಿಸಿ. ಅದಕ್ಕೆ ಕೇಸರಿ ಸೇರಿಸಿ, ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
* ಮಿಶ್ರಣ ತಣಗಾದ ಬಳಿಕ ಸ್ಟ್ರಾಬೆರಿ ಪ್ಯೂರಿಯನ್ನು ಸೇರಿಸಿ, ಮಿಶ್ರಣ ಮಾಡಿ.
* ಈಗ ಕುಲ್ಫಿ ಮೌಲ್ಡ್‌ಗಳಿಗೆ ಮಿಶ್ರಣವನ್ನು ಸುರಿಯಿರಿ. ಅವುಗಳನ್ನು ಫ್ರೀಜರ್‌ನಲ್ಲಿಟ್ಟು 5-6 ಗಂಟೆ ಗಟ್ಟಿಯಾಗಲು ಬಿಡಿ.
* ಕೆಲ ಗಂಟೆಗಳ ಬಳಿಕ ತಣ್ಣನೆಯ ಕುಲ್ಫಿ ತಯಾರಾಗಿದ್ದು, ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ

Comments

Leave a Reply

Your email address will not be published. Required fields are marked *