ಬೆಂಗಳೂರು: ಕೆಲ ದಿನಗಳ ಹಿಂದೆ ಟಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಶ್ರೀ ರೆಡ್ಡಿಗೆ ಕನ್ನಡದ ನಟಿ ಕವಿತಾ ರಾಧೇಶಾಮ್ ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಮಾಡಿರುವ ನಟಿ ರಾಧೇಶಾಮ್, ಟಾಲಿವುಡ್ ನ ಸ್ಟಾರ್ ನಟರ ಹೆಸರು ಹೇಳಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೇ ಅರಬೆತ್ತಲೆ ಪ್ರತಿಭಟನೆ ನಡೆಸಿರುವ ಘಟನೆಯೂ ಸಹ ಸ್ಕ್ರೀಪ್ಟ್ ರೀತಿಯಲ್ಲೇ ಇದೆ. ಆದರೆ ಅವರಿಗೆ ಪ್ರತಿಭಟನೆ ಸಹ ಸರಿಯಾಗಿ ಮಾಡಲು ಬಂದಿಲ್ಲ ಎಂದು ಆರೋಪಿಸಿದ್ದಾರೆ.

ತಮ್ಮ ಫೇಸ್‍ಬುಕ್ ಆರಂಭದಲ್ಲೇ ತಾವು ಈ ವಿಡಿಯೋ ಮಾಡುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ರಾಧೇಶಾಮ್, ತಾನು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ನಟನೇ ಮಾಡುತ್ತಿದ್ದು, ಕನ್ನಡ ಸೇರಿದಂತೆ ಹಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಸ್ನೇಹಿತರು ನನ್ನನ್ನು ಬೌಲ್ಡ್ ನಟಿ ಎಂದು ಕರೆಯುತ್ತಾರೆ. ಇದು ಎಷ್ಟು ಸತ್ಯ ಎಂದು ತಿಳಿಯಲು ಈ ವಿಡಿಯೋ ಮಾಡಿರುವುದಾಗಿ ತಿಳಿಸಿದ್ದಾರೆ.
ಟಾಲಿವುಡ್ ಚಿತ್ರರಂಗ ಪವನ್ ಕಲ್ಯಾಣ್ ಸ್ಟಾರ್ ನಟ. ಇಂತಹ ನಟರ ಹೆಸರು ಬಳಕೆ ಮಾಡಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಉತ್ತರ ಭಾರತ ನಟಿಯರು ಎಲ್ಲದಕ್ಕೂ ಸಿದ್ಧರಿದ್ದು, ಅದ್ದರಿಂದಲೇ ಅವರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿರುವ ಕುರಿತು ರಾಧೇಶಾಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹಲವು ಸೌತ್ ನಟಿಯರು ಬಾಲಿವುಡ್ ನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆದರೆ ನಟನೆ ಮಾಡಲು ಬಾರದ ಇಂತಹ ನಟಿಯರು ಈ ರೀತಿ ಮಾಡುತ್ತಿದ್ದಾರೆ. ಮುಖ್ಯವಾಗಿ ಬೆತ್ತಲೆ ಪ್ರತಿಭಟನೆ ಎಂದರೆ ಖಾಸಗಿ ಅಂಗಾಂಗಳನ್ನು ಮುಚ್ಚಿಕೊಳ್ಳುವುದು ಅಲ್ಲ. ಇದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ವಿಡಿಯೋದಲ್ಲೇ ಬೆತ್ತಲೆಯಾಗಿದ್ದಾರೆ.
ಮುಖ್ಯವಾಗಿ ಶ್ರೀ ರೆಡ್ಡಿ ಅವರು ನಟ ಪವನ್ ಕಲ್ಯಾಣ್ ಅವರ ಬಗ್ಗೆ ಮಾಡಿರುವ ಆರೋಪಗಳ ಕುರಿತು ಕಿಡಿಕಾರಿರುವ ರಾಧೇಶಾಮ್, ತಾವು ಇದುವರೆಗೂ ನಟಿರುವ ಎಲ್ಲಾ ಸಿನಿಮಾ ರಂಗಗಳಲ್ಲೂ ಯಾವುದೇ ನಿರ್ದೇಶಕ, ನಿರ್ಮಾಪಕ ಈ ರೀತಿ ಮಾಡಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಅವರ ನೈಜ ಮುಖವಾಡವನ್ನು ಬಿಚ್ಚಿಡುತ್ತದೆ ಎಂದು ಹೇಳಿದ್ದಾರೆ.
ನಟಿ ಕವಿತಾ ರಾಧೇಶಾಮ್ ಕನ್ನಡ ರಾಗಿಣಿ ಐಪಿಎಸ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಜಾಗ್ವಾರ್, ಖತರ್ನಾಕ್ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಕನ್ನಡ ಮತ್ತೊಂದು ಹೆಸರಿಡದ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
https://www.facebook.com/actresskavita/videos/1974854692555542/
https://twitter.com/actresskavita/status/982883007932530688

Leave a Reply