ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ

ಇಸ್ಲಾಮಾಬಾದ್‌: ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terrorist Attack) ಕೊನೆಗೂ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ʻಆಪರೇಷನ್‌ ಸಿಂಧೂರʼ ಹೆಸರಿನಲ್ಲಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆದಿದೆ. ಭಾರತ ದಾಳಿಗೆ ಬೆಚ್ಚಿರುವ ನಾಗರಿಕರು ಈಗ ಅಲ್ಲಿನ ಮಸರಸಾಗಳ (Madrasa) ವಿರುದ್ಧ ತಿರುಗಿ ಬಿದ್ದಿದ್ದಾರೆ.

ಹೌದು. ʻಆಪರೇಷನ್‌ ಸಿಂಧೂರʼ (Operation Sindoor) ಬಳಿಕ ಪಾಕ್‌ ನಾಗರಿಕರು ಹಾಗೂ ವಿದ್ಯಾರ್ಥಿಗಳು ಅಲ್ಲಿನ ಮದರಸಾಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮದರಸಾಗಳಲ್ಲಿ ಭಯೋತ್ಪಾದನೆಯ ಪಾಠ ಬೋಧಿಸಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಇಂತಹ ಮದರಸಾಗಳನ್ನ ಬಂದ್‌ ಮಾಡುಂತೆಯೂ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

ವಿಡಿಯೋ ವೈರಲ್‌
ಪಾಕಿಸ್ತಾನದ ಗುಹೆರ್ಬಾದ್ ಜಿಲ್ಲೆಯ ಸರ್ಕಾರಿ ಬಾಲಕರ ಫ್ರೌಡಶಾಲೆ ಮೇಲೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರೂ ಸೇರಿದಂತೆ ಎಲ್ಲಾ ನಾಗರಿಕರು ಕಲ್ಲು ತೂರಾಟ ನಡೆಸಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 31 ಸೆಕೆಂಡುಗಳ ಈ ವಿಡಿಯೋನಲ್ಲಿ ಮಹಿಳಾ ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಕ್ರೋಶಭರಿತರಾಗಿ ಕಲ್ಲು ತೂರಾಟ ನಡೆಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

ಪಾಕ್‌ನಲ್ಲೇ ಶುರುವಾಯ್ತಾ ಆಂತರಿಕ ದಂಗೆ?
ಭಾರತ-ಪಾಕ್‌ ನಡುವಿನ ಸಂಘರ್ಷದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಆಂತರಿಕ ದಂಗೆ ಶುರುವಾದಂತೆ ಕಾಣ್ತಿದೆ. ಒಂದೆಡೆದ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಹೋರಾಟಕ್ಕಿಳಿದಿದೆ, ಈ ನಡುವೆ ತಹ್ರಿಕ್‌-ಎ-ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ದಕ್ಷಿಣ ವಜೀರಿಸ್ತಾನದ ಮಿಲಿಟರಿ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರನ್ನ ಹತ್ಯೆ ಮಾಡಿ ಆತಂಕ ಸೃಷ್ಟಿಸಿದೆ. ಈ ಘಟನೆಗಳು ಮಾಸುವ ಮುನ್ನವೇ ನಾಗರಿಕರು ಮದರಸಾಗಳ ವಿರುದ್ಧ ಸಿಡಿದೆದ್ದಿರುವುದು ಆಂತರಿಕ ದಂಗೆಯ ಮುನ್ಸೂಚನೆ ಎಂದು ಕೆಲ ವರದಿಗಳು ತಿಳಿಸಿವೆ. ಇದನ್ನೂ ಓದಿ:  ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ