ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಈ ಸಲಹೆ ಪಾಲಿಸಿ- ಕೇಂದ್ರ ವಿದೇಶಾಂಗ ಇಲಾಖೆ

ಕೀವ್: ರಷ್ಯಾದ ದಾಳಿಯಿಂದ ಯುದ್ಧಪೀಡಿತ ಉಕ್ರೇನ್ ನಲುಗುತ್ತಿದೆ. ಅಲ್ಲಿನ ನಿವಾಸಿಗಳು ಮತ್ತು ಬೇರೆ ಕಡೆಯಿಂದ ಬಂದು ವಾಸಿಸುತ್ತಿರುವವರ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಉಕ್ರೇನ್ ತೊರೆದು ಬರುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ 3 ಪದಗಳನ್ನು ಬಳಕೆ ಮಾಡಲು ಹಾಗೂ ಮತ್ತು ಅಲ್ಲಿಂದ ತಪ್ಪಿಸಿಕೊಂಡು ಬರಲು ಕೆಲವು ಸಲಹೆಗಳನ್ನು ಕೇಂದ್ರ ವಿದೇಶಾಂಗ ಇಲಾಖೆ ವಿದ್ಯಾರ್ಥಿಗಳಿಗೆ ತುರ್ತು ಸಂದೇಶ ರವಾನಿಸಿದೆ.

ಖಾಕೀರ್ವ್‍ಲ್ಲಿರೋ ವಿದ್ಯಾರ್ಥಿಗಳು ತಕ್ಷಣ ಹೊರಡುವಂತೆ ಸಂದೇಶ ಹೊರಡಿಸಲಾಗಿತ್ತು. ಇದೀಗ ಕೆಲವು ಅಂಶಗಳ ಸೂಚನೆಯನ್ನು ಹೊರಡಿಸಲಾಗಿದೆ. ರಷ್ಯಾದ ಕೆಲ ವಾಕ್ಯಗಳನ್ನು ನೆನಪಿಟ್ಟುಕೊಳ್ಳುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿದೆ.

ಈ ಮೂರು ವಾಕ್ಯಗಳನ್ನು ನೆನಪಿಟ್ಟಿಕೊಳ್ಳಿ:
* ನಾವು ವಿದ್ಯಾರ್ಥಿಗಳು, ಹೋರಾಟಗಾರರಲ್ಲ
* ನಮ್ಮ ಮೇಲೆ ದಯವಿಟ್ಟು ದಾಳಿ ಮಾಡಬೇಡಿ
* ನಾವೂ ಭಾರತದಿಂದ ವಿದ್ಯಾಭ್ಯಾಸಕ್ಕಾಗಿ ಬಂದ ವಿದ್ಯಾರ್ಥಿಗಳು

ಈ ಸಲಹೆಯನ್ನು ಪಾಲಿಸಿ:
* ಸಣ್ಣ ಸಣ್ಣ ಗುಂಪುಗಳಾಗಿ ಹೊರಟು ಬಿಡಿ
* ಪ್ರತಿಯೊಂದು ಗುಂಪಿಗೆ ಒಬ್ಬನ ನೇತೃತ್ವ ಇರಲಿ
* ಸ್ಥಳೀಯರೊಂದಿಗೆ ಒಬ್ಬರು ಸಂವಹ ಮಾಡಿ
* ವಾಟ್ಸ್‌ಪ್‌ ಗ್ರೂಪ್‍ಗಳನ್ನು ರಚಿಸಿಕೊಳ್ಳಿ
* ಎಲ್ಲಾ ವಿವರಗಳನ್ನು ಕಂಟ್ರೋಲ್ ರೂಮ್‍ಗೆ ನೀಡಿ
* ನೀವು ಇರುವ ಲೊಕೇಷನ್‍ಗಳನ್ನು ಷೇರ್ ಮಾಡಿ
* ಪ್ರತಿ 8 ಗಂಟೆಗೊಮ್ಮೆ ಮಾಹಿತಿ ಹಂಚಿಕೊಳ್ಳಿ
* ಗುಂಪಿನ ಸದಸ್ಯರ ಇರುವಿಕೆ ಖಾತರಿಪಡಿಸಿಕೊಳ್ಳಿ
* ಎಮರ್ಜೆನ್ಸಿ ಕಿಟ್‍ಗಳನ್ನು ಇಟ್ಟುಕೊಂಡಿರಿ.
* ಪಾಸ್‍ಫೋಟ್, ಐಡಿಕಾರ್ಡ್, ಔಷಧಿಗಳು, ಬೆಂಕಿಪೊಟ್ಟಣ, ಲೈಟರ್, ಕ್ಯಾಂಡಲ್‍ಗಳು, ಹಣ, ಪವರ್ ಬ್ಯಾಂಕ್, ನೀರು, ಪ್ರಥಮ ಚಿಕಿತ್ಸೆ ವಸ್ತು, ಗ್ಲೌಸ್, ಜಾಕೆಟ್, ಶೂ, ಸಾಕ್ಸ್ ನಿಮ್ಮ ಜೊತೆಗೆ ಇರಲಿ ಎಂದು ಸಲಹೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವುದನ್ನು ತಡೆಯಿರಿ, ಶಸ್ತ್ರಾಸ್ತ್ರಗಳು ಅಥವಾ ಯಾವುದೇ ಸ್ಫೋಟಿಸದ ಮದ್ದುಗುಂಡುಗಳು, ಸೇನಾ ವಾಹನಗಳು, ಸೇನೆಗಳು, ಸೈನಿಕರು, ಚೆಕ್‌ ಪೋಸ್ಟ್‌ಗಳು ಚಿತ್ರಗಳ ಸೆಲ್ಫಿಗಳನ್ನು ತೆಗೆದುಕೊಳ್ಳಬೇಡಿ. ಲೈವ್ ಯುದ್ಧದ ಸನ್ನಿವೇಶಗಳನ್ನು ಚಿತ್ರೀಕರಿಸಲು ಪ್ರಯತ್ನಿಸಬೇಡಿ ಎಂದು ಸೂಚನೆ ನೀಡಿದೆ.

Comments

Leave a Reply

Your email address will not be published. Required fields are marked *