ಬೆಂಗ್ಳೂರು ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಪ್ರತಿಮೆ ಸಮರ!

ಬೆಂಗಳೂರು: ನಗರದ ಜ್ಞಾನಭಾರತಿ ಅವರಣದಲ್ಲಿ ಸರಸ್ವತಿ ಪ್ರತಿಮೆ ತೆಗೆದು ಬುದ್ಧನ ಪ್ರತಿಮೆ ಇಡಲಾಗಿದ್ದ ಪ್ರಕರಣ ಸಂಬಂಧ ತಡರಾತ್ರಿವರೆಗೂ ಬೆಂಗಳೂರು ವಿವಿ ಕುಲಪತಿ ಕುಲಸಚಿವರು ಸೇರಿದಂತೆ ಆಡಳಿತ ಮಂಡಳಿ ಸಭೆ ನಡೆಸಿದೆ.

ಸೋಮವಾರ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಹಳೆಯದಾಗಿತ್ತು ಎನ್ನಲಾದ ಸರಸ್ವತಿ ಪ್ರತಿಮೆಯನ್ನು ತೆರವುಗೊಳಿಸಿ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದನ್ನು ಕೆಲ ವಿದ್ಯಾರ್ಥಿಗಳು ವಿರೋಧಿಸಿ ಪ್ರತಿಭಟನೆ ನಡೆಸಿದ ತಕ್ಷಣ ಅಡಳಿತ ಮಂಡಳಿ, ಬುದ್ಧನ ಪ್ರತಿಮೆಯನ್ನು ತೆರವುಗೊಳಿಸಿದ್ದರು.

ಇದರಿಂದ ಕೋಪಗೊಂಡ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು, ಪ್ರತಿಭಟನೆ ನಡೆಸಿದರು. ಇದೇ ವಿಚಾರವಾಗಿ ಸೆಂಟ್ರಲ್ ಕಾಲೇಜ್‍ನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ, ವಿವಿಯ ಕುಲ ಸಚಿವರು, ಕುಲಪತಿಗಳು, ಆಡಳಿತ ಮಂಡಳಿಯವರು, ಸಭೆ ಸೇರಿದ್ದು ಯಾವ ಪ್ರತಿಮೆ ಇಡಬೇಕು ಮತ್ತು ಯಾರ ಗಮನಕ್ಕೂ ತರದೇ ಬುದ್ಧನ ಪ್ರತಿಮೆ ಇಟ್ಟ ವಿದ್ಯಾರ್ಥಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *