ವೈಯಕ್ತಿಕ ರಾಜಕೀಯವನ್ನು ಬದಿಗಿಟ್ಟು ದೇಶ ಉಳಿಸಿ: ಸ್ಟಾಲಿನ್

MK STALIN AND ANNAMALAI

ನವದೆಹಲಿ: ಪ್ರತಿಯೊಬ್ಬರು ತಮ್ಮ ವೈಯಕ್ತಿಕ ರಾಜಕೀಯವನ್ನು ಬದಿಗಿಟ್ಟು ದೇಶವನ್ನು ಉಳಿಸಲು ಒಗ್ಗೂಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ವಿರೋಧಿಸಲು ಕಾಂಗ್ರೆಸ್, ಹಾಗೂ ಎಲ್ಲಾ ರಾಜ್ಯದ ಸ್ಥಳೀಯ ಪಕ್ಷಗಳು ಒಂದಾಗಬೇಕು ಎಂದರು.

ಭಾರತದ ವೈವಿಧ್ಯತೆ, ಒಕ್ಕೂಟ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ, ಭ್ರಾತೃತ್ವ, ರಾಜ್ಯದ ಹಕ್ಕುಗಳು, ಶಿಕ್ಷಣ ಹಕ್ಕುಗಳನ್ನು ನಾವು ಉಳಿಸಿಕೊಳ್ಳಬೇಕಾದರೆ ಎಲ್ಲರೂ ನಮ್ಮ ವೈಯಕ್ತಿಕ ರಾಜಕೀಯ ಮನಸ್ಥಿತಿಯನ್ನು ಬಿಟ್ಟು ಒಂದಾಗಬೇಕು. ಏಕತೆಯೇ ಶಕ್ತಿ ಎಂಬುದನ್ನು ಎಲ್ಲಾ ಪಕ್ಷಗಳು ಅರಿತುಕೊಳ್ಳಬೇಕು. ಭಾರತವನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕು ಎಂದು ಮನವಿ ಮಾಡಿದರು.

ರಾಷ್ಟ್ರ ರಾಜಕೀಯದಲ್ಲಿ ಡಿಎಂಕೆ ಯಾವಾಗಲೂ ಬಹಳ ಮುಖ್ಯವಾಗಿದೆ ಮತ್ತು ಅದು ಯಾವಾಗಲೂ ಹಾಗೆಯೇ ಉಳಿಯುತ್ತದೆ. ಯಾರು ದೇಶದ ಪ್ರಧಾನಿ ಅಥವಾ ಅಧ್ಯಕ್ಷರಾಗಬಹುದು ಎಂಬುದರಲ್ಲಿ ಪ್ರಮುಖ ಪಾತ್ರವಿದೆ. ಡಿಎಂಕೆ ಈಗ ಸಂಸತ್ತಿನಲ್ಲಿ ಮೂರನೇ ಅತಿ ದೊಡ್ಡ ಪಕ್ಷವಾಗಿದೆ ಎಂದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ

ರಾಜ್ಯ ರಾಜಕೀಯ ಮತ್ತು ರಾಷ್ಟ್ರ ರಾಜಕಾರಣದ ನಡುವೆ ವ್ಯತ್ಯಾಸವಿಲ್ಲ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರೀಯ ರಾಜಕೀಯವು ರಾಜ್ಯಗಳ ರಾಜಕೀಯದ ಸಂಯೋಜನೆಯಾಗಿದೆ. ಆದ್ದರಿಂದ, ಎರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು ಭಾಗ್ಯ

Comments

Leave a Reply

Your email address will not be published. Required fields are marked *