ರಾಜ್ಯಮಟ್ಟದ ಕುಸ್ತಿಪಟುವಿನ ಬರ್ಬರ ಹತ್ಯೆ

ಚಂಡೀಗಢ್: ರಾಜ್ಯಮಟ್ಟದ ಕುಸ್ತಿಪಟುವನ್ನು ಕತ್ತಿ ಮತ್ತು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‍ನಲ್ಲಿ ನಡೆದಿದೆ.

ಹರಿಯಾಣದ ಇಸ್ರಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಕುಲ್‍ದೀಪ್ ಅಲಿಯಾಸ್ ದೀಪಾ ಎಂದು ಗುರುತಿಸಲಾಗಿದೆ. ಗ್ರಾಮದ ಧಾನ್ಯ ಮಾರುಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಕುಲದೀಪ್‍ಗೆ ಬುಧವಾರ ರಾತ್ರಿ ಮಾರುಕಟ್ಟೆಯಲ್ಲಿ ಭೇಟಿಯಾಗುವಂತೆ ಫೋನ್ ಬಂದಿದೆ. ಫೋನಿನಲ್ಲಿ ಮಾತನಾಡಿದ ನಂತರ ಅವರನ್ನು ಭೇಟಿಯಾಗಲು ಮಾರುಕಟ್ಟೆಗೆ ಹೋಗಿದ್ದಾನೆ. ಆದರೆ ಈತ ಬರುವಷ್ಟರಲ್ಲೇ ಆರೋಪಿಗಳು ಮುಂಚಿತವಾಗಿ ಬಂದು ಪವರ್ ಕಟ್ ಮಾಡಿದ್ದಾರೆ. ನಂತರ ಕತ್ತಲೆಯಲ್ಲಿ ಕತ್ತಿ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಸ್ತಸ್ರಾವವಾಗಿ ಕಲ್‍ದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕುಲ್‍ದೀಪ್ ಕುಟುಂಬ ಸದಸ್ಯರು ಈ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಶಂಕಿತರ ಹೆಸರನ್ನೂ ಸೂಚಿಸಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕುಲ್‍ದೀಪ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದನು. ಇತ್ತೀಚೆಗೆ ಗಂಗಾನದಿಯ ಗೋಮುಖ್‍ನ ಕನ್ವಾಡ್ ಯಾತ್ರೆಗೆ ಹೋಗಿ ಮನೆಗೆ ಮರಳಿದ್ದನು. ಕುಲ್‍ದೀಪ್ ಕೆಲವು ಪುರುಷರೊಂದಿಗೆ ಫೋನ್‍ನಲ್ಲಿ ಮಾತಿನ ಚಕಮಕಿ ನಡೆಸಿದ್ದಾನೆ. ನಂತರ ಈ ಘಟನೆ ನಡೆದಿದೆ ಎಂದು ಆತನ ಸಹೋದರ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *