ರಾಜ್ಯ ಸಚಿವ ಸಂಪುಟ ರಚನೆ – ಮಧ್ಯಾಹ್ನ 2.12ಕ್ಕೆ ರಾಜಭನದಲ್ಲಿ ಸಮಾರಂಭ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ. ಮಧ್ಯಾಹ್ನ 02-12 ಕ್ಕೆ ರಾಜಭವನದ ಗ್ಲಾಸ್ ಹೌಸ್ ನಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಪ್ರಮಾಣ ವಚನ ಬೋಧಿಸಲಿದ್ದಾರೆ.

ಜೆಡಿಎಸ್ ನಿಂದ 8 ಜನ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಇತ್ತ ಕಾಂಗ್ರೆಸ್ ನಲ್ಲಿ 14-17 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನಿಂದ ಪ್ರಮಾಣ ವಚನ ಸ್ವೀಕರಿಸುವ ವಿಷಯದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದು ಇಂದು ಮಧ್ಯಾಹ್ನದ ಒಳಗೆ ಎಲ್ಲವು ಸರಿಯಾಗಲಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿವೆ.

ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ 1,500 ಜನರಿಗೆ ಪ್ರವೇಶ ಪಡೆಯಲು ಪಾಸ್ ವಿತರಿಸುವಂತೆ ಸರ್ಕಾರದಿಂದ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ. ಒಟ್ಟು ಪ್ರಮಾಣ ವಚನ ಕಾರ್ಯಕ್ರಮ 1 ಗಂಟೆ ಕಾಲ ನಡೆಯಲಿದ್ದು. 03 ಗಂಟೆ 30 ನಿಮಿಷದಲ್ಲಿ ಮುಗಿಯುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *