ಆರ್‌ಜಿವಿ – ಉಪೇಂದ್ರ ಕಾಂಬಿನೇಷನ್‌ನಲ್ಲಿ `ಐ ಆ್ಯಮ್ ಆರ್’ : ಚಿತ್ರದ ಟೈಟಲ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತು ಉಪೇಂದ್ರ ಗುರುತಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ಡೆಡ್ಲಿ ಕಾಂಬಿನೇಷನ್‌ನಲ್ಲಿ `ಐ ಆ್ಯಮ್ ಆರ್’ ಸಿನಿಮಾ ಬರುತ್ತಿದೆ . ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ರಿಲೀಸ್ ಸಮಾರಂಭಕ್ಕೆ ಕಿಚ್ಚ ಸುದೀಪ ಮುಖ್ಯ ಅತಿಥಿಯಾಗಿ ಆಗಮಿಸಿ ಶೀರ್ಷಿಕೆ ಬಿಡುಗಡೆ ಮಾಡಿದರು.

ಇನ್ನು ವೇಳೆ ಟೈಟಲ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್ ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿನಿಮಾದಲ್ಲಿ ಇಲ್ಲ ಅಂತ ನಾನು ನಾಯಕನಾಗಲು ಉಪೇಂದ್ರ ಅವರೆ ಕಾರಣ. ನಿರ್ದೇಶಕನಾಗಬೇಕೆಂದಿದ್ದ ನನಗೆ ನಾಯಕನಾಗಲು ಪ್ರೇರೇಪಿಸಿದೇ ಅವರು. ಇನ್ನೂ ನನ್ನ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿ ನನ್ನ ಸಿನಿಪಯಣ ಆರಂಭಿಸಿದ್ದು ಆರ್‌ಜಿವಿ ಅವರು, ಇವರಿಬ್ಬರ ಜೋಡಿಯಲ್ಲಿ ಉತ್ತಮ ಚಿತ್ರ ಬರವುದು ಖಂಡಿತ.

ನಿರ್ಮಾಪಕ ರಾಜ್ ಯಜಮಾನ್ ಅವರನ್ನು ಬಹಳ ಸಮಯದಿಂದ ನೋಡಿದ್ದೇನೆ. ಇಲ್ಲಿಗೆ ಬಂದು ಅವರ ಇತಿಹಾಸ ತಿಳಿದು ಇನ್ನೂ ಸಂತೋಷವಾಯಿತು. ಈ ವೇಳೆ ಆರ್ ಎಂದರೆ ಏನು ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಮಾತಾನಾಡಿದ್ದು, `ಆರ್’ ಎಂದರೆ ರಿಯಲ್ ಸ್ಟಾರ್ ಆರ್ ಎಂದರೆ ರಾಮ್ ಗೋಪಾಲ್ ವರ್ಮ ಅಂತ ಇರಬೇಕು. ಹಿಂದೆ ಮೂರು `ಆರ್’ ಬಂದಾಗ ಯಾರು ಕೇಳಲಿಲ್ಲ. ಈಗ ಒಂದು `ಆರ್’ ಬಗ್ಗೆ ಎಷ್ಟು ಕೇಳುತ್ತಿದ್ದಿರಾ ನೋಡಿ ಎಂದು ಸುದೀಪ್ ಮಾತಾನಾಡಿದ್ದಾರೆ. ಇದನ್ನೂ ಓದಿ: ಅಣ್ಣಾವ್ರ ಬರ್ತಡೇ ದಿನ ಶಿವಣ್ಣ ನಟನೆಯ `ಘೋಸ್ಟ್’ ಲುಕ್ ರಿಲೀಸ್

 

View this post on Instagram

 

A post shared by RGV (@rgvzoomin)

ನಟ ಉಪೇಂದ್ರ ಅವರು ನಿರ್ದೇಶನ ಮತ್ತು ನಟನೆ ಎರಡರಲ್ಲೂ ಹೆಸರು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಈ ವೇಳೆ `ಆರ್’ ಎಂದರೆ ಏನು ಎಂಬುದನ್ನು ಈಗಲೇ ಹೇಳುವುದಿಲ್ಲ. ಟ್ರೇಲರ್ ಬಿಡುಗಡೆ ಸಮಯದಲ್ಲಿ ಹೇಳುತ್ತೇನೆ. ಒಟ್ಟಿನಲ್ಲಿ ನಮ್ಮಿಬ್ಬರಿಂದ ಉತ್ತಮ ಚಿತ್ರ ಬರಲಿದೆ ಎಂದ ನಿರ್ದೇಶಕ ಆರ್‌ಜಿವಿ ಮಾತಾನಾಡಿದ್ದಾರೆ. ಈ ವೇಳೆ ದೇಶಾದ್ಯಂತ ಭರ್ಜರಿ ಯಶಸ್ಸು ಕಾಣುತ್ತಿರುವ `ಕೆಜಿಎಫ್ 2′ ಚಿತ್ರತಂಡಕ್ಕೆ ಶುಭ ಕೋರಿದರು.

ಆರ್‌ಜಿವಿ ನಿರ್ದೇಶನದ `ಶಿವ’ ಸಿನಿಮಾ ನೋಡಿ, `ಓಂ’ ಚಿತ್ರ ಮಾಡಬೇಕೋ ಬೇಡವೋ ಎಂದು ಯೋಚಿಸಿದ್ದೆ. ಅಂತಹ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿರುವವರು ಆರ್‌ಜಿವಿ ಸರ್ ಅವರ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. `ಐ ಆ್ಯಮ್ ಆರ್’ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಅಭಿಮಾನಿಗಳಿಗೆ ಇಷ್ಟವಾಗುತ್ತೆ ಎಂಬ ವಿಶ್ವಾಸವಿದೆ. ಟೈಟಲ್ ರಿಲೀಸ್ ಮಾಡಿಕೊಟ್ಟ ಸುದೀಪ ಅವರಿಗೆ ಉಪ್ಪಿ ಧನ್ಯವಾದ ತಿಳಿಸಿದ್ದರು. ಇನ್ನೂ ನಿರ್ಮಾಪಕ ರಾಜ್ ಯಜಮಾನ್ ನಿರ್ಮಾಣದಲ್ಲಿ `ಐ ಆ್ಯಮ್ ಆರ್’ ಚಿತ್ರ ಮೂಡಿ ಬರುತ್ತಿದ್ದು, ಭೂಗತ ಲೋಕದ ಕಥೆಯನ್ನ ತೆರೆಯ ಮೇಲೆ ತರಲಾಗುತ್ತಿದೆ. ಆರ್‌ಜಿವಿ ಮತ್ತು ಉಪ್ಪಿ ಕಾಂಬಿನೇಷನ್ ಬಿಗ್ ಸ್ಕ್ರೀನ್‌ನಲ್ಲಿ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *