ಮುಂಬೈ ರೈಲ್ವೇ ಅವ್ಯವಸ್ಥೆ ಬಗ್ಗೆ ಮೊದ್ಲೇ ದೂರು ನೀಡಿದ್ದ ಜನ-ದುರಂತಕ್ಕೆ ಯಾರು ಹೊಣೆ?

ಮುಂಬೈ: ಸೆಂಟ್ರಲ್ ಮುಂಬೈ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದ ದುರಂತವನ್ನು ತಪ್ಪಿಸಬಹುದಿತ್ತೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದಕ್ಕೆ ಕಾರಣ ಈ ದುರಂತದ ಮುನ್ಸೂಚನೆ ಯನ್ನು ಬಹಳ ಹಿಂದೆಯೇ ಹಲವು ಮಂದಿ ಟ್ವಿಟ್ಟರ್ ಮೂಲಕ ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದರು.

ಆದರೂ ಪ್ರಧಾನಿಯಾಗಲಿ ರೈಲ್ವೇ ಸಚಿವರಾಗಲಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. 2016 ಜುಲೈ 28ರಂದು ಚಂದನ್ ಕೆಕೆ ಅನ್ನೊರು, ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದ ಪಾದಚಾರಿ ಸಂಚಾರ ಸೇತುವೆಯಲ್ಲಿ ಜನ ಕಿಕ್ಕಿರಿದು ಸಂಚಾರ ಮಾಡುತ್ತಿರುವುದರಿಂದ ಇಲ್ಲಿ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹಲವರು ಟ್ವೀಟ್ ಮಾಡಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಟ್ವೀಟ್ ಮಾಡಿದ್ದ ರಶ್ಮಿ, ಪಾದಚಾರಿ ಸೇತುವೆಯಲ್ಲಿ ದುರಂತವೊಂದು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಸಿದ್ದರು.

ಫೆಬ್ರವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಸರಣಿ ಟ್ವೀಟ್ ಮೂಲಕ ಬಂದೀಶ್ ಸತ್ರಾ ಕೂಡ ಸರ್ಕಾರವನ್ನು ಎಚ್ಚರಿಸಿದ್ರು. ಜುಲೈನಲ್ಲಿ ಶುಭ ಶಂಕರ್ ಜಾಧವ್, ಹಾಗೂ ಸಂತೋಷ್ ಅನ್ನೋರು ಟ್ವಿಟ್ಟರ್‍ನಲಿ ಈ ಕುರಿತು ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದರೆ ಮುಂಬೈನಲ್ಲಿ ಹೀಗೊಂದು ದುರಂತವನ್ನು ತಪ್ಪಿಸಬಹುದಿತ್ತು.

ನಡೆದಿದ್ದೇನು?: ಶುಕ್ರವಾರ ಇಂದು ಬೆಳಗ್ಗೆ 9.30ರ ಸುಮಾರಿಗೆ ಎಲ್ಫಿನ್‍ಸ್ಟೋನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ರೈಲುಗಳು ಒಂದೇ ವೇಳೆಗೆ ನಿಲ್ದಾಣಕ್ಕೆ ಬಂದಿದ್ದು, ಮಳೆ ಇದ್ದಿದ್ದರಿಂದ ಕೆಲವು ಮಹಿಳಾ ಪ್ರಯಾಣಿಕರು ಜಾರಿ ಬಿದ್ದಿದ್ದಾರೆ. ಎಲ್ಫಿನ್‍ಸ್ಟೋನ್ ಹಾಗೂ ಲೋವರ್ ಪ್ಯಾರೆಲ್ ನಿಲ್ದಾಣಗಳ ಮಧ್ಯೆ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಗಳಿದ್ದು, ಎರಡು ನಿಲ್ದಾಣಗಳನ್ನ ಮುಂಬೈ ರೈಲು ಪ್ರಯಾಣಿಕರು ಹೆಚ್ಚಾಗಿ ಬಳಸುತ್ತಾರೆ

Comments

Leave a Reply

Your email address will not be published. Required fields are marked *