ಕಾಂಗ್ರೆಸ್ ಆಡಿರೋ ಪ್ರತಿಮಾತು ನಮ್ಮ ಹೃದಯವನ್ನು ಇರಿಯುತ್ತಿದೆ: ಸೋಮಶೇಖರ್

ಮೈಸೂರು: ಕಾಂಗ್ರೆಸ್‍ನವರು ವಿಧಾನ ಸಭೆಯಲ್ಲಿ ನಮ್ಮ ಬಗ್ಗೆ ಆಡಿರುವ ಪ್ರತಿ ಮಾತು ನಮ್ಮ ಹೃದಯವನ್ನು ಇರಿಯುತ್ತಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೀನಿಗೆ ಗಾಣ ಹಾಕಿ ಅದರ ಮಾಂಸ ಕಿತ್ತು ಬರುವ ರೀತಿ ಮೇಲಕ್ಕೆ ಎಳೆಯುತ್ತಾರೋ ಅದೇ ರೀತಿ ಕಾಂಗ್ರೆಸ್ ಅವರು ನಮ್ಮ ಬಗ್ಗೆ ಮಾತಾಡಿದ್ದಾರೆ. ಇಷ್ಟು ಮಾತು ಕೇಳಿಸಿಕೊಂಡವರು ಮತ್ತೆ ಆ ಪಕ್ಷಕ್ಕೆ ಹೋಗುತ್ತೇವಾ ಎಂದು ಕಿಡಿಕಾರಿದರು.

bjp - congress

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಪ್ರತಿಷ್ಠೆಗಾಗಿ ಪೈಪೋಟಿ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಆಗಾಗ ಬೇರೆ ಪಕ್ಷದ ಶಾಸಕರು ತನ್ನ ಸಂಪರ್ಕದಲ್ಲಿ ಇದ್ದಾರೆಂದು ಹೇಳುತ್ತಿರುತ್ತಾರೆ. ಇದನ್ನು ಮೀರಿಸಲು ಸಿದ್ದರಾಮಯ್ಯ ಈಗ ತನಗೂ ಕೆಲ ಶಾಸಕರು ಸಂಪರ್ಕ ದಲ್ಲಿ ಇದ್ದಾರೆಂದು ಹೇಳುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸರ್ಕಾರ ಮರೆತರು, ಜನಪ್ರತಿನಿಧಿಗಳು ಕೊಟ್ಟ ಹಣದಲ್ಲಿ ಗ್ರಂಥಾಲಯ ನಿರ್ಮಿಸಿದ ಅನಕ್ಷರಸ್ಥ!

ತಮ್ಮ ಶಕ್ತಿ ತೋರಿಸಲು ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋದ ಶಾಸಕರನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಳಸಿಕೊಳ್ಳುತ್ತಿದ್ದಾರೆ. ನಾವು ಯಾಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗಬೇಕು. ಅಲ್ಲಿಂದ ಇಲ್ಲಿಗೆ ಬಂದ ಎಲ್ಲಾ ಶಾಸಕರು ಚೆನ್ನಾಗಿಯೇ ಇದ್ದೇವೆ. ನಮಗೆ ಯಾರಿಗೂ ಕಾಂಗ್ರೆಸ್ ಅವಶ್ಯಕತೆ ಇಲ್ಲ ಎಂದರು. ಇದನ್ನೂ ಓದಿ: ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ: ಆನಂದ್ ಸಿಂಗ್

Comments

Leave a Reply

Your email address will not be published. Required fields are marked *