SSLC ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್..!

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಸಿಬಿಎಸ್‍ಇ ಮಾದರಿಯಲ್ಲಿ ಪರೀಕ್ಷೆ ರದ್ದಿಗೆ ಮನವಿ ಮಾಡಲಾಗಿತ್ತು. ಅರ್ಜಿದಾರ ಸಂಗ್ರೇಗೌಡ ಮನವಿಗೆ ಸರ್ಕಾರದಿಂದ ಆಕ್ಷೇಪಣೆ ವ್ಯಕ್ತಪಡಿಸಲಾಯ್ತು. 2 ದಿನಗಳ ಕಾಲ ಮಾತ್ರ ಪರೀಕ್ಷೆ ನಡೆಸುತ್ತೇವೆ. ತಲಾ ಒಂದು ಗಂಟೆಯ ಅವಧಿಯ ಪರೀಕ್ಷೆ ಇರುತ್ತೆ. ವಿದ್ಯಾರ್ಥಿಗಳ ಮುಂಜಾಗೃತೆಗೆ ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಪರೀಕ್ಷೆ ಸಂಬಂಧ ಎಅ? ಒಪಿ ಹೊರಡಿಸಲಾಗಿದೆ. ಯಾವ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗುತ್ತಾರೋ ಎಲ್ಲರನ್ನೂ ಪಾಸ್ ಮಾಡಲಾಗುವುದು ಅಂತಾ ಎಜಿ ಪ್ರಭುಲಿಂಗ ನಾವಡಗಿ ಹೈಕೋರ್ಟ್ ಗಮನಕ್ಕೆ ತಂದ್ರು. ಇದನ್ನೂ ಓದಿ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

ಹೈಕೋರ್ಟ್ ಅಭಿಪ್ರಾಯ:
ಕೋವಿಡ್ ಸೋಂಕು ಕಡಿಮೆ ಇರುವುದರಿಂದ ಪರೀಕ್ಷೆ ನಡೆಸುವುದು ಸೂಕ್ತ ಅಂತಾ ನ್ಯಾ.ಬಿ.ವಿ.ನಾಗರತ್ನ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೋರ್ಡ್ ಪರೀಕ್ಷೆ ಬರೆಯಬೇಕು. ಅವರ ಭವಿಷ್ಯದ ಆಯ್ಕೆ ದೃಷ್ಟಿಯಿಂದ ಅಗತ್ಯ. 3 ಗಂಟೆಗಳ ಬದಲಿಗೆ 1 ಗಂಟೆ ಪರೀಕ್ಷೆ ಇದೆ. ಪರೀಕ್ಷೆ ಇಲ್ಲವಾದರೆ ಅಂಕ ನೀಡುವುದು ಹೇಗೆ..? ಪರೀಕ್ಷೆ ಬರೆಯದಿರುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು, ವಿದ್ಯಾರ್ಥಿಗಳ ಪರವಾಗಿ ಪೋಷಕರು ನಿರ್ಧರಿಸಲಿ. ಈಗ ಬರೆಯದಿದ್ದರೆ ಮುಂದಿನ ವರ್ಷ ಪರೀಕ್ಷೆ ಬರೆಯಲಿ ಅಂತಾ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಸರ್ಕಾರದ ನಿರ್ಧಾರದಂತೆ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.  ಇದನ್ನೂ ಓದಿ: ಸುಮಲತಾ ಬೇಬಿ ಬೆಟ್ಟಕ್ಕೆ ಬನ್ನಿ ಅಂದ್ರೆ ಬರುತ್ತೇನೆ: ಪುಟ್ಟರಾಜು

Comments

Leave a Reply

Your email address will not be published. Required fields are marked *