ಬಾಹುಬಲಿಯ ಜೊತೆ ಪಾಕಿಸ್ತಾನಕ್ಕೆ ಹೊರಟ ನಿರ್ದೇಶಕ ರಾಜಮೌಳಿ

ನವದೆಹಲಿ: ಬಾಹುಬಲಿ ಸಿನಿಮಾ ಪಾಕಿಸ್ತಾನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ಖುಷಿಯನ್ನ ನಿರ್ದೇಶಕ ಎಸ್.ಎಸ್ ರಾಜಮೌಳಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಟ್ಟರ್ ನಲ್ಲಿ ಟ್ವೀಟ್ ಮಾಡಿರುವ ರಾಜಮೌಳಿಯವರು,”ಬಾಹುಬಲಿ ಸಿನಿಮಾ ನನಗೆ ಸಾಕಷ್ಟು ಅವಕಾಶಗಳನ್ನ ತಂದುಕೊಟ್ಟಿದೆ. ಇದರಿಂದ ನಾನು ಹಲವಾರು ದೇಶಗಳನ್ನ ಸುತ್ತಿದ್ದೇನೆ. ಇದರಲ್ಲಿ ಪಾಕಿಸ್ತಾನಕ್ಕೆ ಬಂದಿರುವುದಕ್ಕೆ ಬಹಳ ಉತ್ಸಾಹದಿಂದ್ದಿದೇನೆ. ನನ್ನನ್ನು ಆಹ್ವಾನಿಸಿರುವ ಪಾಕಿಸ್ತಾನದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೃದಯಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

2017ರ ಮೇ ತಿಂಗಳಿನಲ್ಲಿ ಬಾಹುಬಲಿ ಸಿನಿಮಾ ಪಾಕಿಸ್ತಾನದಲ್ಲಿ ಭರ್ಜರಿ ಪ್ರರ್ದಶನಗೊಂಡಿತ್ತು. ಈ ವರ್ಷದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪಾಕಿಸ್ತಾನದ ಕರಾಚಿಯಿಂದ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರಿಗೆ ಆಮಂತ್ರಣ ಸಿಕ್ಕಿದೆ.

250 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಬಾಹುಬಲಿ ಭಾಗ 2 ಬಾಕ್ಸ್ ಆಫೀಸ್‍ನಲ್ಲಿ 18 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2017ರ ಏಪ್ರಿಲ್ 28 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್, ರಾಣಾ ದಗ್ಗು ಭಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಕೃಷ್ಣ, ಸತ್ಯರಾಜ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು.

Comments

Leave a Reply

Your email address will not be published. Required fields are marked *