`ಆರ್‌ಆರ್‌ಆರ್’ ಪಾರ್ಟ್ 2 ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಜಮೌಳಿ

ಸಿನಿಮಾರಂಗದಲ್ಲಿ ಹವಾ ಕ್ರಿಯೇಟ್ ಮಾಡಿರುವ ಸಿನಿಮಾ ಅಂದ್ರೆ ರಾಜಮೌಳಿ(RajaMouli) ನಿರ್ದೇಶನದ `ಆರ್‌ಆರ್‌ಆರ್'(RRR) ಚಿತ್ರ. ರಾಮ್‌ಚರಣ್(Ramcharan) ಮತ್ತು ತಾರಕ್ (Tarak) ಜುಗಲ್‌ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ `ಆರ್‌ಆರ್‌ಆರ್’ ಪಾರ್ಟ್ 2 ಬರೋದರ ಬಗ್ಗೆ ಸಂದರ್ಶನವೊಂದರಲ್ಲಿ ರಾಜಮೌಳಿ ರಿವೀಲ್ ಮಾಡಿದ್ದಾರೆ.

ಈ ವರ್ಷ ತ್ರಿಬಲ್ ಆರ್ ಭಾರತದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಚಿತ್ರ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದರು. ಇತ್ತೀಚೆಗೆ ಈ ಚಿತ್ರವನ್ನು ಜಪಾನ್ ನಲ್ಲೂ ರಿಲೀಸ್ ಮಾಡಲಾಯಿತು. ಅಲ್ಲೂ ಕೂಡ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಸಿನಿಮಾದ ಸೀಕ್ವೆಲ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಆರ್‌ಆರ್‌ಆರ್ ಪಾರ್ಟ್ 2(RRR Part 2) ಬಗ್ಗೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮದುವೆ ಸುದ್ದಿ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ರು ಹನ್ಸಿಕಾ ಮೋಟ್ವಾನಿ

ನಿರ್ದೇಶಕ ರೌಜಮೌಳಿ ಆರ್‌ಆರ್‌ಆರ್ -2 ಬರುವುದು ಕನ್ಫರ್ಮ್ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಮೌಳಿ ಆರ್‌ಆರ್‌ಆರ್ ಸೀಕ್ವೆಲ್ ಬಗ್ಗೆ ವಿವರಿಸಿದ್ದಾರೆ. ಆರ್ ಆರ್ ಆರ್-2 ಬರುತ್ತಾ ಇಲ್ವೋ ಎನ್ನುವ ಅಭಿಮಾನಿಗಳ ಗೊಂದಲಕ್ಕೆ ಉತ್ತರ ನೀಡಿದ್ದಾರೆ. ಈ ಬಗ್ಗೆ ಆರ್‌ಆರ್‌ಆರ್ ನಿರ್ದೇಶಕ, ನನ್ನ ಎಲ್ಲಾ ಸಿನಿಮಾಗಳಿಗೆ ನನ್ನ ತಂದೆಯೇ ಕಥೆ ಬರೆಯುವುದು. ನಾವು `ಆರ್‌ಆರ್‌ಆರ್ 2′ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರೇ ಕಥೆಯ ಮೇಲೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

`ಬಾಹುಬಲಿ’ ಬಳಿಕ ರೌಜಮೌಳಿ ಆರ್‌ಆರ್‌ಆರ್ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದರು. ಇಡೀ ವಿಶ್ವ ಟಾಲಿವುಡ್ ಕಡೆ ತಿರುಗಿ ನೋಡುವಂತೆ ಮಾಡಿದರು. ದಕ್ಷಿಣದ ಸಿನಿಮಾಗಳ ಬಗ್ಗೆ ಮತ್ತೆ ದೇಶ ವಿದೇಶಗಳಲ್ಲಿ ಚರ್ಚೆಯಾಗುವಂತೆ ಮಾಡಿದರು. ಇದೀಗ ಆರ್‌ಆರ್‌ಆರ್ ಸೀಕ್ವೆಲ್ ಬಗ್ಗೆ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]