ಆಮೀರ್ ಪುತ್ರನ ಚಿತ್ರಕ್ಕೆ ಶ್ರೀದೇವಿ 2ನೇ ಪುತ್ರಿ ನಾಯಕಿ

ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ನಟನೆಯ ಮೂರನೇ ಸಿನಿಮಾಗೆ ಶ್ರೀದೇವಿ ಅವರ 2ನೇ ಪುತ್ರಿ ಖುಷಿ ಕಪೂರ್ (Khushi Kapoor) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿರುವ ಜುನೈದ್ ಅವರಿಗೆ ಇದು ಮೂರನೇ ಸಿನಿಮಾ. ಈ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ.

ಜುನೈದ್ ಖಾನ್ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ 2ನೇ ಸಿನಿಮಾದ ಶೂಟಿಂಗ್‌ ಕೂಡ ಮುಗಿಸಿ ಕೊಟ್ಟಿದ್ದಾರೆ. ಈ ಮೂಲಕ ಬಿಟೌನ್‌ನಲ್ಲಿ ಜುನೈದ್‌ ಗಮನ ಸೆಳೆಯುತ್ತಿದ್ದಾರೆ. ಈ ಎರಡೂ ಚಿತ್ರಗಳೂ ಇನ್ನೂ ರಿಲೀಸ್ ಆಗಿಲ್ಲ. ಆದರೂ, ಮೂರನೇ ಸಿನಿಮಾಗೆ ಆಫರ್ ಸಿಕ್ಕಿದೆ.

ಸಾಯಿ ಪಲ್ಲವಿ ಜೊತೆಗಿನ ಚೊಚ್ಚಲ ಸಿನಿಮಾದ ಶೂಟಿಂಗ್‌ ಕೂಡ ಕಂಪ್ಲೀಟ್‌ ಆಗಿದೆ. ಜಪಾನ್‌ ಸೇರಿದಂತೆ ಹಲವು ಕಡೆ ಸಿನಿಮಾದ ಶೂಟಿಂಗ್ ನಡೆದಿದೆ. ಜುನೈದ್ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಮಹಾರಾಜ’ (Maharaja Film) ಸಿನಿಮಾ ನೋಡೋಕೆ ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ.

 

ಪ್ರತಿಷ್ಠಿತ ಸಂಸ್ಥೆಯ ಜೊತೆ ಜುನೈದ್ ಖಾನ್ (Junaid Khan) ಕೈ ಜೋಡಿಸಿದ್ದಾರೆ. 58 ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಮೊದಲ ಸಿನಿಮಾಗಿಂತ 2ನೇ ಚಿತ್ರದ ಕಥೆ ಭಿನ್ನವಾಗಿದೆ. ಮೊದಲ ಸಿನಿಮಾ ರಿಲೀಸ್‌ ಆಗುವ ಮುಂಚೆಯೇ ಆಮೀರ್‌ ಪುತ್ರನಿಗೆ ಭಾರೀ ಬೇಡಿಕೆಯಿದೆ.