ರಾಜಗುರು ಮಠದ ಶ್ರೀ ಯೋಗಿರಾಜೇಂದ್ರ ಮಹಾಸ್ವಾಮೀಜಿ ಲಿಂಗೈಕ್ಯ

ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ಗಂಗೇಭಾವಿ ಗ್ರಾಮದ ರಾಜಗುರು ಮಠದ ಶ್ರೀ ಯೋಗಿರಾಜೇಂದ್ರ ಮಹಾಸ್ವಾಮಿ ಲಿಂಗೈಕ್ಯರಾಗಿದ್ದಾರೆ.

ಶ್ರೀ ಯೋಗಿರಾಜೇಂದ್ರ ಮಹಾಸ್ವಾಮಿಗಳಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಯೋಗಿರಾಜೇಂದ್ರ ಮಹಾಸ್ವಾಮಿ ಲಿಂಗೈಕ್ಯರಾಗಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆ ಗಂಗೇಭಾವಿ ಮಠದ ಆವರಣದಲ್ಲಿ ವೀರೇಶ್ವರ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮದ ಹಾಗೂ ರಾಜ್ಯದ ನಾನಾ ಭಾಗದ ಮಠದ ಭಕ್ತರು ಶ್ರೀಗಳ ಆಂತಿಮ ದರ್ಶನ ಪಡೆಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *