ಕುಮಾರಸ್ವಾಮಿ ಅವರದ್ದು ಮಾಟ ಮಂತ್ರ ಮಾಡೋ ಕುಟುಂಬ: ಎಸ್.ಆರ್ ಶ್ರೀನಿವಾಸ್

ತುಮಕೂರು: ಹೊಟ್ಟೆಗೆ ಏನ್ ತಿಂತಿಯಾ, ಮಾಟ ಮಂತ್ರ ಮಾಡೋ ಕುಟುಂಬ ನಿನ್ನದು. ನಾಚಿಕೆ ಆಗಲ್ವಾ ನಿನಗೆ ಎಂದು ಏಕ ವಚನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ.

ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮದು ನಾಲಿಗೆನಾ. ಬಾಯಿ ಬಿಟ್ಟರೆ ಅಸತ್ಯ. ಗ್ಲಿಸರಿನ್ ಹಾಕಿ ಕಣ್ಣೀರು ಹಾಕ್ತಿಯಾ. ಎಂಥಾ ಆಸಾಮಿಗಳು ಇವರು. 20 ವರ್ಷ ಪಕ್ಷ ಕಟ್ಟಿದ್ದ ನನ್ನ ಆಚೆಗೆ ಹಾಕ್ತಿಯಾ. ಗಣಿ ದುಡ್ಡು ಬಂತು ಅಂತೇಳಿ. ನಿನಗೆ ಮಾನಮರ್ಯಾದೆ ಇಲ್ಲ. ಮೊಸಳೆ ಕಣ್ಣೀರಿನ ಮೂಲಕ ಜನರನ್ನು ತಲುಪಲು ಇನ್ನೂ ಆಗಲ್ಲ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

ನನಗೆ ಯಾರೂ ದಿಕ್ಕಿಲ್ಲ. ಕಾಂಗ್ರೆಸ್‍ನವರೇ ಈಗ ನನಗೆ ದಿಕ್ಕು. ಸಿದ್ದರಾಮಣ್ಣ ಜೊತೆಗೆ ಕರೆದುಕೊಂಡು ಹೋದರೆ ಅವರ ಜೊತೆ ಹೋಗುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

ಜೆಡಿಎಸ್‍ನಿಂದ ಹೊರಬಿದ್ದಿರುವ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಎಂಎಲ್‍ಸಿ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರುವುದು ಫಿಕ್ಸ್ ಆಗಿದೆ. ಖಾಸಗಿ ಆಸ್ಪತ್ರೆ ಉದ್ಘಾಟನೆಗೆಂದು ಗುಬ್ಬಿಗೆ ಬಂದಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಸಮಾವೇಶ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಜೊತೆ ಎಸ್‍ಆರ್ ಶ್ರೀನಿವಾಸ್ ಮತ್ತು ಬೆಮೆಲ್ ಕಾಂತರಾಜು ಕಾಣಿಸಿಕೊಂಡರು. ಎಸ್‍ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ರೆ ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಎಂದು ಸಿದ್ರಾಮಯ್ಯ ಘೋಷಿಸಿದರು. ನೀವಿಬ್ರು ಪಕ್ಷಕ್ಕೆ ಬಂದ್ರೆ ಗೌರವಯುತವಾಗಿ ನಡೆಸಿಕೊಳ್ತೀವಿ ಎಂದು ಆಫರ್ ನೀಡಿದರು.

Comments

Leave a Reply

Your email address will not be published. Required fields are marked *