ಲ್ಯಾಂಡಿಂಗ್ ವೇಳೆ ಸ್ಪೈಸ್‌ಜೆಟ್ ವಿಮಾನ ಅವಘಡ – ಪ್ರಯಾಣಿಕರ ಮೇಲೆ ಲಗೇಜ್‌ಗಳ ಸುರಿಮಳೆ

ಕೋಲ್ಕತ್ತಾ: ಸ್ಪೈಸ್‌ಜೆಟ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಭಾರೀ ಬಿರುಗಾಳಿಗೆ ಸಿಲುಕಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಲಗೇಜ್‌ಗಳು ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಭಾನುವಾರ ರಾತ್ರಿ ವಾಯು ಪ್ರದೇಶದ ಬಿರುಗಾಳಿ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ನ ಎಸ್‌ಜಿ-945 ವಿಮಾನ ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಲಗೇಜ್ ಬ್ಯಾಗ್‌ಗಳು ಪ್ರಯಾಣಿಕರ ತಲೆ ಮೇಲೆ ಬಿದ್ದಿರುವ ಪರಿಣಾಮ ಹೆಚ್ಚಿನವರ ತಲೆಗೆ ಗಾಯಗಳಾಗಿವೆ. ಇದನ್ನೂ ಓದಿ: ರಾಷ್ಟ್ರೀಯತೆ ಕಲಿಯಲು ಕೇಜ್ರಿವಾಲ್ RSS ಕಚೇರಿಗೆ ಭೇಟಿ ನೀಡಬೇಕು: ಬಿಜೆಪಿ ಸಂಸದ

ಗಾಯಗೊಂಡಿರುವ 40 ಪ್ರಯಾಣಿಕರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿವೆ. ಉಳಿದವರು ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಂಭೀರ ಗಾಯಗಳಾದವರಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಖಲೀಸ್ತಾನ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಆಪ್ ನಾಯಕ ಹರ್‌ಪ್ರೀತ್‌ಸಿಂಗ್

ವಿಮಾನ ಭೀಕರ ಗಾಳಿಗೆ ಹೇಗೆ ಸಿಲುಕಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿರುಗಾಳಿಗೆ ಸಿಲುಕಿದ ವಿಮಾನ ತೀವ್ರಗತಿಯಲ್ಲಿ ಅಲುಗಾಡಿ, ಕ್ಯಾಬಿನ್‌ನಲ್ಲಿದ್ದ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *