ರೋಗಿಯನ್ನು ಕರೆದೊಯ್ಯಲು ಹೋಗುತ್ತಿದ್ದ ಅಂಬುಲೆನ್ಸ್‌ ಪಲ್ಟಿ , ಚಾಲಕ ಪಾರು

ಚಿಕ್ಕಬಳ್ಳಾಪುರ: ರೋಗಿ ಕರೆದೊಯ್ಯಲು ಹೋಗುತ್ತಿದ್ದ ಅಂಬುಲೆನ್ಸ್‌ (Ambulance) ಭೀಕರ ಅಪಘಾತಕ್ಕೀಡಾಗಿದ್ದು (Accident) ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ಬೈಚಾಪುರ ಗ್ರಾಮದ ಬಳಿ ನಡೆದಿದೆ.

ರೋಗಿಯನ್ನು ಕರೆತರಲು ಅತಿ ವೇಗವಾಗಿ ತೆರಳುತ್ತಿದ್ದ ಖಾಸಗಿ ಆಸ್ಪತ್ರೆಯ (Private Hospital) ಅಂಬುಲೆನ್ಸ್‌ ಬೈಚಾಪುರ ರಸ್ತೆಯ ಆಕಾಶ್ ಆಸ್ಪತ್ರೆ ಎದುರು ಬೈಕ್‌ಗೆ ಡಿಕ್ಕಿಯಾಗಿ ನಂತರ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

ಅಂಬುಲೆನ್ಸ್‌ ಗುದ್ದಿದ ವಿದ್ಯುತ್ ಕಂಬಗಳು ಮುರಿದು ಧರೆಗುರುಳಿವೆ.  ಅಂಬುಲೆನ್ಸ್ ಪಲ್ಟಿಯಾಗಿದ್ದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.