ಕೋಲಾರ: ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ, ಸರ್ಕಾರ ಇನ್ನೇನು ಪತನವಾಗುತ್ತೆ ಅಂತ ಕಳೆದ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಆದರೆ ಹಲವು ಒತ್ತಡಗಳು ನಡುವೆಯೂ ಕೂಲ್ ಆಗಿ ಸ್ಪೀಕರ್ ರಮೇಶ್ ಕುಮಾರ್ ಮಡದಿಯೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ರಾಜ್ಯದ ರಾಜಕೀಯ ಬೆಳವಣಿಗೆ ಮಧ್ಯದಲ್ಲಿ ಕೂಲ್ ಆಗಿರುವ ಸ್ಪೀಕರ್ ರಮೇಶ್ ಕುಮಾರ್, ರಾಜ್ಯ ರಾಜಕಾರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಹೊಲದಲ್ಲಿ ಕುರಿ-ಕೋಳಿ ಮೇಯಿಸಿಕೊಂಡು ಸಮಯ ಕಳೆಯುತ್ತಿದ್ದಾರೆ.

ರಮೇಶ್ ಕುಮಾರ್ ಶುಕ್ರವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿನ ತಮ್ಮ ತೋಟದಲ್ಲಿ ಸಮಯ ಕಳೆದಿದ್ದು, ತಮ್ಮ ಪತ್ನಿ ವಿಜಯಮ್ಮ ಜೊತೆಗೆ ಕುರಿ, ಕೋಳಿ ಹಾಗೂ ಪಾಲೀಹೌಸ್ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಾಗಿಂಗ್ ಡ್ರಸ್ ನಲ್ಲಿ ಇಡೀ ದಿನ ತಮ್ಮ ತೋಟದ ಮನೆಯಲ್ಲಿ ಬೀಡುಬಿಟ್ಟಿದ್ದರು.
ಎರಡು ದಿನದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೊತೆಗೆ ಮಾತುಕತೆ ನಡೆಸಿ ವಾಪಸ್ಸಾದ ಸ್ಪೀಕರ್ ಮತ್ತೆ ಬೆಂಗಳೂರಿನತ್ತ ತೆರಳಲಿಲ್ಲ. ತೋಟದ ಮನೆಯಲ್ಲಿ ಸೇರಿಕೊಂಡು ಕಳೆದ ಮೂರು ದಿನಗಳಿಂದ ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿ ಹಳ್ಳಿ ಜೀವನ ಎಂಜಾಯ್ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply