ಬೆಂಗಳೂರು: ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್‍ಪಿ ರವಿ. ಡಿ ಚನ್ನಣ್ಣನವರ್ ಅವರು ತಮ್ಮ ಸಹೋದ್ಯೋಗಿ ಜೊತೆ ಕಬಡ್ಡಿ ಆಟ ಆಡಿ ತಮ್ಮ ಬಾಂಧವ್ಯವನ್ನು ಮೆರೆದಿದ್ದಾರೆ.
ಬೆಂಗಳೂರು ಹೊರವಲಯ ಬ್ಯಾಡರಹಳ್ಳಿ ಪೊಲೀಸ್ ಮೈದಾನದಲ್ಲಿ, ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಕಬಡ್ಡಿ ಆಟ ಆಡಿ ದೇಶಿಯ ಕ್ರೀಡೆಗೆ ಒತ್ತು ನೀಡಿದ್ದಾರೆ. ಸಹೋದ್ಯೋಗಿಗಳ ಜೊತೆ ಆಟಕ್ಕೂ ಸೈ, ಕಾನೂನು ಪಾಲನೆಗೂ ಸೈ ಎನ್ನುವಂತೇ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ ಚನ್ನಣ್ಣನವರ್ ಅಧಿಕಾರಿಗಳ ಜೊತೆ ಅಂಗಳದಲ್ಲಿ ಕಾದಾಟ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

ಎಸ್‍ಪಿ ರವಿ.ಡಿ ಚೆನ್ನಣ್ಣವರ್ ಅವರಿಗೆ ನೆಲಮಂಗಲ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕಬಡ್ಡಿ ಆಟದ ಹಲವಾರು ತಂತ್ರಗಳನ್ನು ಬಳಸಿ ಆಟ ವಾಡುತ್ತಿರುವುದು ಕಂಡು ಬಂದಿದ್ದು, ಕ್ರೀಡಾಪಟುಗಳಿಗೆ ಇನ್ನಷ್ಟು ಹುರುಪು ತಂದಿದೆ.

Leave a Reply