ದಕ್ಷಿಣದ ಕುಂಭಮೇಳ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ – ರಥೋತ್ಸವಕ್ಕೆ ಭಕ್ತರ ದಂಡು

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿ ಪಡೆದಿರುವ ಕೊಪ್ಪಳದ (Koppal) ಗವಿಮಠ ಜಾತ್ರಾಮಹೋತ್ಸವ (Gavi Siddeshwara Mutt) ನಡೆಯುತ್ತಿದ್ದು, ಭಕ್ತರ ದಂಡು ಹರಿಬರುತ್ತಿದೆ.

ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಮಠದ ಮಹಾ ರಥೋತ್ಸವ ಇಂದು (ಜ.15) ಸಂಜೆ 5:30ಕ್ಕೆ ನಡೆಯಲಿದೆ. ಖ್ಯಾತ ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ ಕುಮಾರ್ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ ಸ್ವಾಮೀಜಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ಮಂಗಳೂರು| ಹಳೆ ನಾಣ್ಯ ಖರೀದಿಸುವುದಾಗಿ ಹೇಳಿ ವ್ಯಕ್ತಿಗೆ 58 ಲಕ್ಷ ವಂಚನೆ

ಬೆಳಗ್ಗೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಮಠದ ಆವರಣದಲ್ಲಿ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ, ಹರಕೆ ತೀರಿಸುತ್ತಿದ್ದಾರೆ.

ಇನ್ನೂ ಸಂಜೆ ರಥೋತ್ಸವ ನಡೆಯಲಿರುವ ಹಿನ್ನೆಲೆ ಅಪಾರ ಭಕ್ತರು ಆಗಮಿಸಲಿದ್ದು, ಪೊಲೀಸ್ ಬಿಗಿಬಂದೋ ಬಸ್ತ್ ಮಾಡಲಾಗಿದೆ. ಇಬ್ಬರು ಅಡಿಷನಲ್ ಎಸ್ಪಿ, 9 ಡಿಎಸ್‌ಪಿ, 35 ಸಿಪಿಐ ಸೇರಿದಂತೆ 1,600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತಮುತ್ತ ಪೊಲೀಸರ ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: ಮಂಡ್ಯ | ಸಂಕಷ್ಟ ಪರಿಹಾರಕ್ಕೆ ಶಕ್ತಿ ದೇವತೆಗೆ ದರ್ಶನ್ ವಿಶೇಷ ಪೂಜೆ