WTC Final – ಬೌಲರ್‌ಗಳ ಅಬ್ಬರಕ್ಕೆ ಮೊದಲ ದಿನವೇ 14 ವಿಕೆಟ್‌ ಪತನ

ಲಂಡನ್‌: ಆಸ್ಟ್ರೇಲಿಯಾ (Australia) ಮತ್ತು ದಕ್ಷಿಣ ಆಫ್ರಿಕಾ(South Africa) ಮಧ್ಯೆ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ (WTC Final) ಮೊದಲ ದಿನವೇ ಬೌಲರ್‌ಗಳ ಅಬ್ಬರಕ್ಕೆ 14 ವಿಕೆಟ್‌ ಪತನಗೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 56.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲೌಟ್‌ ಅಗಿದೆ. ನಂತರ ಬ್ಯಾಟ್‌ ಬೀಸಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದೆ.

ಆಸ್ಟ್ರೇಲಿಯಾ ಪರ ಬ್ಯೂ ವೆಬ್‌ಸ್ಟರ್ 72 ರನ್‌ (92 ಎಸೆತ, 11 ಬೌಂಡರಿ) ಹೊಡೆದರೆ ಸ್ವೀವ್‌ ಸ್ಮಿತ್‌ 66 ರನ್‌ (112 ಎಸೆತ,10 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಇವರಿಬ್ಬರು 114 ಎಸೆತಗಳಲ್ಲಿ 79 ರನ್‌ ಜೊತೆಯಾಟವಾಡಿದ್ದರಿಂದ ತಂಡ ಮೊತ್ತ 200 ರನ್‌ಗಳ ಗಡಿಯನ್ನು ದಾಟಿತು. ಇದನ್ನೂ ಓದಿ: ಆರ್‌ಸಿಬಿ ತಂಡವನ್ನು ಮಾರಾಟ ಮಾಡುತ್ತಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

ಕಗಿಸೊ ರಬಾಡ 5 ವಿಕೆಟ್‌, ಮಾರ್ಕೊ ಜಾನ್ಸೆನ್ 3 ವಿಕೆಟ್‌ ಕಿತ್ತರು. ಕೇಶವ್‌ ಮಹಾರಾಜ್‌ ಮತ್ತು ಏಡೆನ್ ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದರು.

ನಂತರ ಬ್ಯಾಟ್‌ ಬೀಸಿದ ಆಫ್ರಿಕಾ 4 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಏಡೆನ್ ಮಾರ್ಕ್ರಾಮ್ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರು. ರಯಾನ್ ರಿಕೆಲ್ಟನ್ 16 ರನ್‌, ವಿಯಾನ್ ಮುಲ್ಡರ್ 6 ರನ್‌, ಟ್ರಿಸ್ಟಾನ್ ಸ್ಟಬ್ಸ್ 2 ರನ್‌ ಗಳಿಸಿ ಪೆವಿಲಿಯನ್‌ಗೆ ನಡೆದರು. ಇದನ್ನೂ ಓದಿ: ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

ದಿನದ ಅಂತ್ಯಕ್ಕೆ ನಾಯಕ ಟೆಂಬಾ ಬವುಮಾ 3 ರನ್‌, ಡೇವಿಡ್‌ ಬೆಡಿಂಗ್ಹ್ಯಾಮ್ 8 ರನ್‌ ಗಳಿಸಿದ್ದು ಗುರುವಾರ ಬ್ಯಾಟ್‌ ಮುಂದುವರಿಸಲಿದ್ದಾರೆ. ಮಿಚೆಲ್ ಸ್ಟಾರ್ಕ್ 2 ವಿಕೆಟ್‌ ಕಿತ್ತರೆ ಜೋಶ್ ಹ್ಯಾಜಲ್‌ವುಡ್ ಮತ್ತು ನಾಯಕ ಪ್ಯಾಟ್‌ ಕಮ್ಮಿನ್ಸ್‌ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.