ನವದೆಹಲಿ: ಸೌತ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿವಿಲಿಯರ್ಸ್ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಸೋತ ದಕ್ಷಿಣ ಆಫ್ರಿಕಾ ವಿಶ್ವಕಪ್ನಿಂದ ಹೊರಬಿದ್ದ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ 2018 ಮೇನಲ್ಲಿ ನಿವೃತ್ತಿ ಹೊಂದಿದ್ದ ಸೌತ್ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ ಮ್ಯಾನ್ ಎಬಿ ಡಿವಿಲಿಯರ್ಸ್ ಅವರು ಮತ್ತೆ ವಿಶ್ವಕಪ್ ತಂಡಕ್ಕೆ ಮರಳಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದವು.

ಈ ಎಲ್ಲಾ ವದಂತಿಗಳಿಗೂ ಶುಕ್ರವಾರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತೆರೆಎಳೆದ ವಿಲಿಯರ್ಸ್, ನಾನು ಸೌತ್ ಆಫ್ರಿಕಾದ ವಿಶ್ವಕಪ್ ತಂಡಕ್ಕೆ ಮತ್ತೆ ಮರಳಲು ಯಾವುದೇ ಬೇಡಿಕೆ ಮಾಡಿಲ್ಲ. ನಾನು ನಿವೃತ್ತಿ ಹೊಂದಿದ್ದು ನನ್ನ ಪತ್ನಿ ಮತ್ತು ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯಲು ಇಷ್ಟಪಡುತ್ತೇನೆ. ನಾನು ಮತ್ತೆ ತಂಡಕ್ಕೆ ವಾಪಾಸ್ ಆಗಲು ಯಾವುದೇ ರೀತಿಯ ಯೋಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
https://www.instagram.com/p/Bzz81FmAyDT/?utm_source=ig_embed
ಈ ಪೋಸ್ಟ್ ಗೆ ಪ್ರತಿಕ್ರಿಯೇ ನೀಡಿರುವ ಯುವರಾಜ್, “ನನ್ನ ಪ್ರೀತಿಯ ಗೆಳೆಯ ಮತ್ತು ಲೆಜೆಂಡ್. ನಾನು ಕ್ರಿಕೆಟ್ ಆಡಿದ ಅದ್ಭುತ ವ್ಯಕ್ತಿಗಳಲ್ಲಿ ನೀನು ತುಂಬ ಒಳ್ಳೆಯ ಆಟಗಾರ. ನೀನು ಇಲ್ಲದೇ ಸೌತ್ ಆಫ್ರಿಕಾಗೆ ವಿಶ್ವಕಪ್ ಗೆಲ್ಲಲು ಯಾವುದೇ ಅವಕಾಶವಿಲ್ಲ. ನೀನು ತಂಡದಲ್ಲಿ ಇಲ್ಲದೇ ಇರುವುದು ನಿನಗಿಂತ ನಿನ್ನ ತಂಡಕ್ಕೆ ಹೆಚ್ಚು ನಷ್ಟ. ದೊಡ್ಡ ಆಟಗಾರರು ಹೆಚ್ಚು ಟೀಕೆಗಳನ್ನು ಎದರಿಸಬೇಕಾಗುತ್ತದೆ. ನೀನು ಏನು ಎಂಬುದು ನಮಗೆ ಗೊತ್ತಿದೆ. ನೀನೊಬ್ಬ ಜೆಂಟಲ್ ಮ್ಯಾನ್” ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಕಮೆಂಟ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು, “ನನ್ನ ಸಹೋದರ ನನಗೆ ತಿಳಿದಿರುವ ಅತ್ಯಂತ ಪ್ರಮಾಣಿಕ ಮತ್ತು ಬದ್ಧ ವ್ಯಕ್ತಿ ನೀನು. ನಿನಗೆ ಈ ರೀತಿ ಆಗಿರುವುದು ನನಗೆ ನೋವಾಗಿದ ಮತ್ತು ನಾವು ನಿನ್ನ ಜೊತೆ ಇದ್ದೇವೆ, ನಿನ್ನನ್ನು ನಂಬುತ್ತೇವೆ. ಕೆಲ ಜನರು ನಿನ್ನ ವೈಯಕ್ತಿಕ ಜೀವನಕ್ಕೆ ಬರುತ್ತಿರುವುದು ನೋಡಿದರೆ ತುಂಬ ದುಃಖವಾಗುತ್ತಿದೆ. ನಿನಗೂ ಮತ್ತು ನಿನ್ನ ಸುಂದರ ಕುಟುಂಬಕ್ಕೆ ಆ ದೇವರು ಹೆಚ್ಚಿನ ಪ್ರೀತಿ ಮತ್ತು ಶಕ್ತಿಯನ್ನು ಕೊಡಲಿ. ನಾನು ಮತ್ತು ಅನುಷ್ಕಾ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.

ಸೌತ್ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಟಿ-ಟ್ವಿಂಟಿ ಪಂದ್ಯಗಳನ್ನು ಆಡಿರುವ ವಿಲಿಯರ್ಸ್ 8,765 ರನ್ ಗಳನ್ನು ಟೆಸ್ಟ್ ನಲ್ಲಿ, ಏಕದಿನದಲ್ಲಿ 9,577 ರನ್ ಮತ್ತು ಟಿ-ಟ್ವಿಂಟಿ 1,672 ರನ್ ಬಾರಿಸಿದ್ದಾರೆ. ಟೆಸ್ಟ್ ನಲ್ಲಿ 22 ಶತಕ ಮತ್ತು 46 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಏಕದಿನ ಪಂದ್ಯಗಲ್ಲಿ 25 ಶತಕ, 53 ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ವಿಶ್ವದ ಅತ್ಯಂತ ವೇಗದ ಶತಕ ಸಿಡಿಸಿದ ಆಟಗಾರ ಎಂದೇ ಹೆಸರರಾದ ವಿಲಿಯರ್ಸ್ ಮೇ 2018 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು.

Leave a Reply