ಎಸ್‌ಐಟಿ ವಿಚಾರಣೆಗೆ ಹಾಜರಾದ ಸೌಜನ್ಯ ಮಾವ ವಿಠಲ ಗೌಡ

ಮಂಗಳೂರು: ಸೌಜನ್ಯಳ (Soujanya) ಮಾವ ವಿಠಲಗೌಡ (Vital Gowda) ಅವರು ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿದ್ದಾರೆ.

ಎಸ್ಐಟಿ ನೋಟೀಸ್ ನೀಡಿದ ಹಿನ್ನಲೆಯಲ್ಲಿ ವಿಠಲ ಗೌಡ ವಿಚಾರಣೆಗೆ ಹಾಜರಾಗಿದ್ದಾರೆ. ಜಯಂತ್ ಟಿ,ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡ ನಿಕಟ ಸಂಪರ್ಕದಲ್ಲಿದ್ದರು.  ಇದನ್ನೂ ಓದಿ:  ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ಮುಂದೆ ಜಯಂತ್‌ ಹೇಳಿಕೆ

ವಿಠಲ ಗೌಡ ಬುರುಡೆ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್