ದುಬಾರಿ ಕಾರು ಖರೀದಿಸಿದ ಸೋನು ನಿಗಂ

ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ದುಬಾರಿ ಕಾರೊಂದನ್ನು ಖರೀದಿಸಿದ್ದು, ಇನ್ನೂ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೋನು ನಿಗಂ ಹಿಂದಿ, ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಹಾಡನ್ನು ಹಾಡುವ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಕನ್ನಡದಲ್ಲಿ ಮುಂಗಾರು ಮಳೆ ಸೇರಿದಂತೆ ಹಲವಾರು ಸಿನಿಮಾ ಗೀತೆಗಳನ್ನು ಹಾಡಿರುವ ಸೋನು ನಿಗಂ ಇಂಪಾದ ಧ್ವನಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಅಚ್ಚು ಮೆಚ್ಚು. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

ಇತ್ತೀಚೆಗಷ್ಟೇ ಸೋನು ನಿಗಂ ಅವರು ಶೋ ರೂಮ್‍ನಲ್ಲಿ ಕಿಯಾ ಕಾರ್ನಿವಲ್ ಕಾರೊಂದನ್ನು ಖರೀದಿಸಿದ್ದಾರೆ. ಇನ್ನೂ ಈ ಕಾರಿನ ಕೀ ಅನ್ನು ಸೋನು ನಿಗಂ ಸ್ವೀಕರಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಭಾರತದಲ್ಲಿ ತಯಾರಾಗುವ ಕಿಯಾ ಕಾರ್ನಿವಲ್ ಕಾರಿನ ಬೆಲೆ 24.95 ಲಕ್ಷದಿಂದ ಪ್ರಾರಂಭವಾಗಿ 33.99 ಲಕ್ಷದವರೆಗೂ ಇರುತ್ತದೆ. ಈ ಕಾರಿನಲ್ಲಿ 7 ಸೀಟ್‍ಗಳಿದ್ದು, ಮಧ್ಯದಲ್ಲಿ ಎರಡು ಕ್ಯಾಪ್ಟನ್ ಸೀಟ್‍ಗಳಿರುತ್ತದೆ. ಇದನ್ನೂ ಓದಿ: ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಿದ ಯರಪ್ಪನಹಳ್ಳಿ ಗ್ರಾಮಸ್ಥರು

Comments

Leave a Reply

Your email address will not be published. Required fields are marked *