ಭಾರತದ ಆರ್ಥಿಕತೆ ಕುಸಿಯುತ್ತಿದೆ, ಹಣಕಾಸು ಹೊಂದಿಸಲು ಸರ್ಕಾರದ ಆಸ್ತಿ ಮಾರಲಾಗ್ತಿದೆ: ಸೋನಿಯಾ ಗಾಂಧಿ

ನವದೆಹಲಿ: ಭಾರತದ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಿದೆ. ಇದನ್ನು ಸರಿಪಡಿಸಬೇಕಿದ್ದ ಸರ್ಕಾರ ಆರ್ಥಿಕ ಹಿಂಜರಿತ ಮುಚ್ಚಿಡಲು ಸರ್ಕಾರದ ಆಸ್ತಿ ಮಾರಾಟ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಬಳಿಕ ಇದೇ ಮೊದಲ ಬಾರಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡ್ಕೊಂಡಿದ್ದಾರೆ: ಹೆಚ್‍ಡಿಕೆ

ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಎನ್ನುವುದು ಘೋಷಣೆಗೆ ಸೀಮಿತವಾಗಿದೆ ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ವಿದೇಶಾಂಗ ನೀತಿಯನ್ನು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಗಡಿಯಲ್ಲಿ ಗಂಭೀರ ಸಮಸ್ಯೆಯನ್ನು ದೇಶ ಎದುರಿಸುತ್ತಿದೆ. ಆದರೆ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಚೀನಾ ವಿಚಾರದಲ್ಲಿ ನರೇಂದ್ರ ಮೋದಿ ಮೌನ ತಾಳಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ

ಇನ್ನು ಲಖೀಂಪುರ್ ಖೇರಿ ಪ್ರಕರಣದಲ್ಲಿ ಬಿಜೆಪಿ ಮನಸ್ಥಿತಿ ಗೊತ್ತಾಗುತ್ತಿದ್ದು, ರೈತರ ಪ್ರತಿಭಟನೆ ಬಗ್ಗೆಯೂ ಸೋನಿಯಾಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಈ ನಡುವೆ ಎಸ್ಸಿ ,ಎಸ್‍ಟಿ ಹಿಂದುಳಿದ ವರ್ಗದವರ ಉದ್ಯೋಗಕ್ಕೆ ಹೊಡೆತ ಬೀಳುತ್ತಿದೆ. ಪೆಟ್ರೋಲ್ ದರ ನೂರರ ಗಡಿ ದಾಟಿದೆ, ಗ್ಯಾಸ್ ಬೆಲೆ ರೂ 900ಕ್ಕೂ ಹೆಚ್ಚಿದೆ. ಇದರಿಂದ ಸಾರ್ವಜನಿಕರ ಜೀವನ ದುಸ್ತರವಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *