ಗುಜರಾತ್ ವಿಧಾನಸಭಾ ಚುನಾವಣೆಗೆ ಸೋನಿಯಾ ಗಾಂಧಿಯಿಂದ ಮಾಸ್ಟರ್ ಪ್ಲಾನ್!

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿರುವಂತೆ ಮೋದಿ-ಶಾ ಜೋಡಿಯ ನಾಗಲೋಟ ತಡೆಯುವ ಸಲುವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಪಕ್ಷ ನಾಯಕರ ಸಭೆ ಕರೆದಿದ್ದಾರೆ.

ಇಂದು ಜಂಟಿ ರಣತಂತ್ರ ಸಭೆ ನಡೆಯಲಿದೆ. ಪಶ್ಚಿಮ ಬಂಗಾಳ ಸಿಎಂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ. ಎಡಪಕ್ಷಗಳು, ಡಿಎಂಕೆ, ಆರ್‍ಜೆಡಿ, ಬಿಎಸ್‍ಪಿ, ಎನ್‍ಸಿಪಿ, ನ್ಯಾಷನಲ್ ಕಾನ್ಫೆರೆನ್ಸ್, ಸಮಾಜವಾದಿ ಪಕ್ಷದ ಮುಖಂಡರನ್ನೂ ಆಹ್ವಾನಿಸಲಾಗಿದೆ. ಬಿಜೆಪಿ ಜೊತೆ ಮೈತ್ರಿ ವಿರುದ್ಧ ಬಿಹಾರ ಸಿಎಂ ನಿತೀಶ್‍ಕುಮಾರ್ ವಿರುದ್ಧ ಮುನಿಸಿಕೊಂಡಿರುವ ಜೆಡಿಯು ಅಧ್ಯಕ್ಷ ಶರದ್ ಯಾದವ್‍ಗೂ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ತವರಲ್ಲೇ ಮೋದಿ-ಶಾ ಜೋಡಿಗೆ ಮುಖಭಂಗ-ಸೋನಿಯಾ ಬಂಟನಿಗೆ ರಾಜಕೀಯ ಜೀವದಾನ

ಸಭೆಯಲ್ಲಿ ದೇಶಾದ್ಯಂತ ರೈತರ ಸಮಸ್ಯೆ, ಪ್ರತಿಪಕ್ಷಗಳ ವಿರುದ್ಧ ಸರ್ಕಾರಿ ತನಿಖಾ ಸಂಸ್ಥೆಗಳ ದುರ್ಬಳಕೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. 2019ರ ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ-ಶಾ ತಂತ್ರಕ್ಕೆ ಒಗ್ಗೂಡಿ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಅಹ್ಮದ್ ಪಟೇಲ್ ಗೆಲ್ಲಿಸಿದ್ದಕ್ಕೆ ಡಿಕೆಶಿಗೆ ಹೈಕಮಾಂಡ್ ನಿಂದ ಬಂಪರ್ ಗಿಫ್ಟ್!

Comments

Leave a Reply

Your email address will not be published. Required fields are marked *