ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

– ಹನಿಮೂನ್‌ಗೆ ಹೋಗಿದ್ದ ಉದ್ಯಮಿ ತನ್ನ ಪತ್ನಿಯಿಂದಲೇ ಕೊಲೆ ಕೇಸ್‌

ಶಿಲ್ಲಾಂಗ್‌: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ ಹೊರಡುವಾಗ ನನ್ನ ಮಗ 10 ಲಕ್ಷ ಮೌಲ್ಯದ ಆಭರಣ ಧರಿಸುವಂತೆ ಸೊಸೆ ಒತ್ತಾಯಿಸಿದ್ದಳು. ಅದರಂತೆ ಅವನು ಆಭರಣ ಧರಿಸಿದ್ದ ಎಂದು ಹತ್ಯೆಗೀಡಾದ ಉದ್ಯಮಿ ರಾಜಾ ರಘುವಂಶಿ ತಾಯಿ ಉಮಾ ಕಣ್ಣೀರಿಟ್ಟಿದ್ದಾರೆ.

ಸೋನಮ್‌ ಎಂಬಾಕೆಯನ್ನು ರಾಜಾ ರಘುವಂಶಿ ಮದುವೆಯಾಗಿದ್ದರು. ವಿವಾಹವಾದ ಒಂದು ವಾರದ ಬೆನ್ನಲ್ಲೇ ನವಜೋಡಿ ಹನಿಮೂನ್‌ಗೆಂದು (Honeymoon Murder) ಶಿಲ್ಲಾಂಗ್‌ ಪ್ರವಾಸ ಕೈಗೊಂಡಿದ್ದರು. ಆದರೆ, ಸೋನಮ್‌ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

ಈ ಕುರಿತು ರಘುವಂಶಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸೊಸೆ ಸೋನಮ್ ರಘುವಂಶಿ ಮೇಘಾಲಯಕ್ಕೆ ಹನಿಮೂನ್ ಪ್ರವಾಸಕ್ಕಾಗಿ ಪ್ರಯಾಣ ಮತ್ತು ವಾಸ್ತವ್ಯ ಸೇರಿದಂತೆ ಎಲ್ಲಾ ಬುಕಿಂಗ್‌ಗಳನ್ನು ಮಾಡಿದ್ದಳು. ಆದರೆ, ರಿಟರ್ನ್ ಟಿಕೆಟ್ ಬುಕ್ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

ಸೋನಂ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದ್ದಳು. ನನ್ನ ಮಗನಿಗೆ ಶಿಲ್ಲಾಂಗ್ ಪ್ರದೇಶದ ಬಗ್ಗೆ ತಿಳಿದಿರದ ಕಾರಣ ಅವಳು ಶಿಲ್ಲಾಂಗ್‌ಗೆ ಪ್ರವಾಸಕ್ಕೆ ಪ್ಲಾನ್‌ ಮಾಡಿದ್ದಳು. ರಾಜಾ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದ. ಅದಕ್ಕೆ ಕಾರಣ ಸೋನಮ್.‌ ಚಿನ್ನಾಭರಣ ಧರಿಸುವಂತೆ ಅವನಿಗೆ ಒತ್ತಾಯಿಸಿದ್ದಳು. ಅದರಲ್ಲಿ ವಜ್ರದ ಉಂಗುರ, ಸರ ಮತ್ತು ಬಳೆ ಇದ್ದವು ಎಂದು ರಾಜಾ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

ಪ್ರವಾಸಕ್ಕೆ ಯಾಕೆ ಇಷ್ಟೊಂದು ಚಿನ್ನಾಭರಣ ಹಾಕ್ಕೊಂಡು ಹೋಗುತ್ತಿದ್ದೀಯ ಎಂದು ನನ್ನ ಪುತ್ರನ ಬಳಿ ಕೇಳಿದ್ದೆ. ಆಭರಣ ಧರಿಸಬೇಕು ಅಂತ ಸೋನಮ್‌ ಬಯಸಿದ್ದಾಳೆ. ಅದಕ್ಕೆ ಹಾಕ್ಕೊಂಡಿದ್ದೇನೆ ಎಂದು ಪ್ರವಾಸಕ್ಕೆ ಹೊರಡುವ ಮುನ್ನ ರಾಜಾ ನನಗೆ ಹೇಳಿದ್ದ ಎಂದು ತಿಳಿಸಿದ್ದಾರೆ.

ಸೋನಮ್ ನನ್ನ ಜೊತೆ ಚೆನ್ನಾಗಿಯೇ ಇದ್ದಳು. ಒಂದುವೇಳೆ ಆಕೆ ಕೊಲೆಯಲ್ಲಿ ಭಾಗಿಯಾಗಿದ್ದರೆ, ಅವಳನ್ನು ಗಲ್ಲಿಗೇರಿಸಬೇಕು. ಸೋನಮ್ ಪತ್ತೆಯಾಗಿದ್ದಾಳೆಂದು ಪೊಲೀಸರು ಬೆಳಗ್ಗೆಯೂ ಹೇಳಿರಲಿಲ್ಲ. ಸಿಬಿಐ ತನಿಖೆ ನಡೆಯಬೇಕು ಎಂದು ರಾಜಾ ತಾಯಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್