ಸೋನಮ್ ಮದ್ವೆಗೆ ಬಂದ ಅತಿಥಿಗಳಿಗೆ ಸಿಕ್ತು ವಿಚಿತ್ರ ಗಿಫ್ಟ್!

ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಮಂಗಳವಾರ ವಿವಾಹವಾಗಿದ್ದಾರೆ.

ಸೋನಮ್ ಮದುವೆಗೆ ಮುಂಚೆ ಮೆಹಂದಿ, ಅರಿಶಿಣ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಎಲ್ಲಾ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಮೆಹಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ.

ಹೌದು, ಸೋನಮ್ ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳಿಗೆಲ್ಲ ಒಂದು ಜೋಡಿ ಶೂ ನೀಡಲಾಗಿದೆ. ಆ ಶೂ ಅನ್ನು ವಿಶೇಷವಾಗಿ ಕೈ ಮಗ್ಗದಲ್ಲಿ ವಿನ್ಯಾಸಗೊಳಿಸಲಾಗಿತ್ತು. ಬಿಳಿ ಬಣ್ಣದಿಂದ ಅಲಂಕರಿಸಿ ಅದಕ್ಕೆ ಮಿರರ್ ಮತ್ತು ಸೀಕ್ವಿನ್(ಮಿನುಗು ಬಟ್ಟು) ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಹಾಕಿ ಶೂ ಅನ್ನು ತಯಾರಿಸಲಾಗಿತ್ತು. ಈ ರೀತಿಯ ವಿಶೇಷವಾಗಿ ತಯಾರಿಸಿದ್ದ ಶೂ ಅನ್ನು ಮೆಹಂದಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ಸೋನಮ್ ಕಪೂರ್

ಸೋನಮ್ ಮೇ 8ರಂದು ಬಾಂದ್ರಾದಲ್ಲಿರುವ ತನ್ನ ಆಂಟಿಯ ಬಂಗಲೆಯಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದು, ತಮ್ಮ ಬಹುದಿನಗಳ ಗೆಳೆಯ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸೋನಮ್ ಕಪೂರ್ ಮದುವೆಗೆ ಬಾಲಿವುಡ್‍ನ ಗಣ್ಯಾತಿಗಣ್ಯರು ಹಾಜರಾಗಿದ್ದರು. ಅಮಿತಾಬ್ ಬಚ್ಚನ್, ಅವರ ಮಕ್ಕಳು ಅಭಿಷೇಕ್, ಅಮೀರ್ ಖಾನ್, ಜಾಕ್ವೇಲಿನ್ ಫರ್ನಾಂಡಿಸ್, ರಾಣಿ ಮುಖರ್ಜಿ, ಸ್ವರ ಭಾಸ್ಕರ್ ಆಗಮಿಸಿದ್ದರು.

ಸೋನಮ್ ಅವರ ಸೋದರ ಸಂಬಂಧಿಗಳಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ತನ್ನ ತಂದೆ ಬೋನಿ ಕಪೂರ್ ಜೊತೆ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕರೀನಾ ಕಪೂರ್ ತನ್ನ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್ ಹಾಗೂ ಸಹೋದರಿ ಕರಿಷ್ಮ ಕಪೂರ್ ಜೊತೆ ಕುಟುಂಬ ಸಮೇತರಾಗಿ ಆಗಮಿಸಿದ್ದು, ಎಲ್ಲರು ನವ ಜೋಡಿಗೆ ಶುಭಾ ಹಾರೈಸಿದ್ದಾರೆ. ಇದನ್ನೂ ಓದಿ: ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

ಮಂಗಳವಾರ ಬೆಳಗ್ಗೆ ಮದುವೆಯಾದ ನಂತರ ಸಂಜೆ ಲೀಲಾ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಆರತಕ್ಷತೆಯಲ್ಲಿ ಕತ್ರಿನಾ ಕೈಫ್, ಐಶ್ವರ್ಯ ರೈ ಬಚ್ಚನ್, ಅಲಿಯಾ ಭಟ್ ಹಾಗೂ ಹಲವು ಸಿನಿಮಾ ಗಣ್ಯರು ಮಂದಿ ಪಾಲ್ಗೊಂಡಿದ್ದರು.

ಸದ್ಯಕ್ಕೆ ಸೋನಮ್ `ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *