ಮುಂಬೈ: ಬಾಲಿವುಡ್ ಚೆಲುವೆ ಸೋನಂ ಕಪೂರ್ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸದ್ಯ ಈ ಜೋಡಿ ವಿದೇಶ ಪ್ರವಾಸದಲ್ಲಿದ್ದು, ಇವರಿಬ್ಬರ ಸ್ವಿಮಿಂಗ್ ಪೂಲ್ ಬಳಿಯ ಕಿಸ್ಸಿಂಗ್ ಫೋಟೋ ವೈರಲ್ ಆಗಿದೆ.
ವಿದೇಶ ಪ್ರವಾಸದಲ್ಲಿರುವ ಸೋನಂ ಮತ್ತು ಆನಂದ್ ತಮ್ಮ ಇನ್ಸ್ ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇಟಲಿಯಲ್ಲಿರುವ ಅಹುಜಾ ದಂಪತಿ ಕಿಸ್ಸಿಂಗ್ ಫೋಟೋ ನೋಡಿದ ನೆಟ್ಟಿಗರು ಫುಲ್ ಥ್ರಿಲ್‍ಗೆ ಒಳಗಾಗಿದ್ದಾರೆ. ಕೆಲವರು ಲಿವ್ಲಿ ಅಂತಾ ಬರೆದ್ರೆ, ಮತ್ತೆ ಕೆಲವರು ರಿಯಲ್ ಲವ್ ಬರ್ಡ್ಸ್ ಅಂತಾ ಕಮೆಂಟ್ ಹಾಕಿದ್ದಾರೆ. ಇದನ್ನೂ ಓದಿ: ಬೆಡ್‍ರೂಮಿಗೆ ಹೋಗೋ ಮೊದಲು ಸೋನಂಗೆ ಷರತ್ತು ಹಾಕಿದ ಆನಂದ್!

ಇತ್ತ ರಜಾದಿನಗಳನ್ನು ಕಳೆಯಲು ದೇಸಿ ಗರ್ಲ್ ಪ್ರಿಯಾಂಕ ಚೋಪ್ರ ಮತ್ತು ಗೆಳೆಯ ನಿಕ್ ಜೋನ್ಸ್ ಇಟಲಿ ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿ ಒಂದಾಗಿರುವ ಸ್ಟಾರ್ ಜೋಡಿಗಳು ಮೋಜು ಮಸ್ತಿಯಿಂದ ರಜಾ ದಿನ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸೋನಂ ಕಪೂರ್ ಗೆ ಎರಡು ಮದ್ವೆ!
ಮೇ ಮೊದಲ ವಾರದಲ್ಲಿ ಸೋನಂ ಮತ್ತು ಆನಂದ್ ಸಿಖ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಸೋನಂ ಮದುವೆಗೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಕರಣ್ ಜೋಹರ್, ಜಾನ್ವಿ ಕಪೂರ್, ಬೋನಿ ಕಪೂರ್ ಸೇರಿದಂತೆ ಬಾಲಿವುಡ್ ತಾರಾಗಣವೇ ಭಾಗವಹಿಸಿತ್ತು. ಸೋನಂ ಮದುವೆ ಬಳಿಕ ವೀರೇ ದಿ ವೆಡ್ಡಿಂಗ್, ಸಂಜು ಚಿತ್ರ ತೆರೆಕಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BoKEI4FB9pZ/?taken-by=sonamkapoor.anandahuja

Leave a Reply