ಮೊದಲ ಮಗುವಿನ ಸ್ವಾಗತಕ್ಕೆ ಭಾವನಾತ್ಮಕ ಪೋಸ್ಟ್ ಮಾಡಿದ ನಟಿ ಸೋನಂ ಕಪೂರ್

ಬಾಲಿವುಡ್‌ನ ಹಾಟ್ ನಟಿ ಸೋನಂ ಕಪೂರ್ ದಂಪತಿ ತಾವು ಮೊದಲ ಮಗುವಿನ ನೀರಿಕ್ಷೆಯಲ್ಲಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋನಮ್ ಕಪೂರ್ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾಲ್ಕು ಕೈಗಳು ಹಾಗೂ ಎರಡು ಹೃದಯ ನಿಮ್ಮೊಂದಿಗೆ ಪ್ರತಿ ಹೆಜ್ಜೆಯಲ್ಲೂ ಮಿಡಿಯುತ್ತವೆ. ಪ್ರೀತಿ ಮತ್ತು ಬೆಂಬಲದೊಂದಿಗೆ ನಾವು ನಿಮ್ಮನ್ನು ಅತ್ಯುತ್ತಮವಾಗಿ ಬೆಳೆಸುತ್ತೇವೆ. ನಿಮ್ಮನ್ನು ಸ್ವಾಗತಿಸಲು ನಾವು ಕಾಯಲು ಸಾಧ್ಯವಿಲ್ಲ ಎಂದು ಭಾವನಾತ್ಮಕವಾದ ಕ್ಯಾಪ್ಷನ್ ಕೊಟ್ಟಿದ್ದಾರೆ.

 

View this post on Instagram

 

A post shared by Sonam Kapoor Ahuja (@sonamkapoor)

ಸೋನಮ್ ಹಾಗೂ ಆನಂದ್ ಅಹುಜಾ 2018ರಲ್ಲಿ ವಿವಾಹವಾಗಿದ್ದರು. ಆನಂದ್ ಅಹುಜಾ ಅವರು ಉದ್ಯಮಿಯಾಗಿದ್ದಾರೆ. ಇವರು ರಫ್ತು ಆಮದು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಸೋನಮ್ ಅವರು ಮದುವೆಯ ಬಳಿಕ ಸಿನಿಮಾರಂಗದಿಂದ ದೂರವಾಗಿ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ದಂಪತಿ ಲಂಡನ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬೇಬಿ ಬಂಪ್ ಫೋಟೊ ಹರಿದಾಡುತ್ತಿದ್ದಂತೆ, ಕರೀನಾ ಕಪೂರ್ ಖಾನ್, ಖುಷಿ ಕಪೂರ್, ಏಕ್ತಾ ಕಪೂರ್ ಹಾಗೂ ಅಭಿಮಾನಿಗಳು ಸೋನಮ್ಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

 

Comments

Leave a Reply

Your email address will not be published. Required fields are marked *