ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ, ರಿಲೇಶನ್‍ಶಿಪ್ ಬಗ್ಗೆ ಮಾತನಾಡಿದ್ದಾರೆ. ರಿಲೇಶಪ್‍ನಲ್ಲಿ ಇದ್ದಾಗ ಕಲಿಯೋದು, ಮುಂದೆ ಹೋಗೋದು ಮಾಡಬೇಕು ಎಂದು ಸೋನಾಕ್ಷಿ ಹೇಳಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಾಕ್ಷಿ ಮದುವೆ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಲಿರುತ್ತದೆ. ಈಗಾಗಲೇ ಸೋನಾಕ್ಷಿ ಡೇಟಿಂಗ್ ಮಾಡುತ್ತಿರುವ ವಿಚಾರ ಕೂಡ ಕೇಳಿ ಬಂದಿತ್ತು. ಈ ಎಲ್ಲ ಅಂತೆ-ಕಂತೆ, ರಿಲೇಶನ್‍ಶಿಪ್, ಮದುವೆ ಬಗ್ಗೆ ಏನು ಪರಿಕಲ್ಪನೆ ಇದೆ ಎಂಬುದನ್ನು ಅವರು ಇತ್ತೀಚೆಗೆ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ. ತನ್ನದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಸಂಬಂಧಗಳಿಂದ ಕಲಿಯೋದು, ಮುಂದೆ ಹೋಗುವುದು ತುಂಬ ಮುಖ್ಯ. ನಮ್ಮನ್ನು ಯಾರು ಸಹಿಸಿಕೊಳ್ತಾರೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಾನು ಈ ವಿಷಯದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ನಾನು ರಿಲೇಶನ್‍ಶಿಪ್‍ನಲ್ಲಿದ್ದಾಗ ತುಂಬ ಚಿಕ್ಕವಳಾಗಿದ್ದೆ, ತುಂಬ ಕೆಲಸ ಮಾಡಲು ಆರಂಭಿಸಿದೆ, ಸಾಕಷ್ಟು ಹೊಸ ಜನರನ್ನು ಭೇಟಿ ಮಾಡಿದೆ. ಅವೆಲ್ಲವೂ ನಿಮ್ಮನ್ನು ವ್ಯಕ್ತಿಯಾಗಿ ಬದಲಿಸುತ್ತದೆ. ನೀವು ಹೀಗೆ ಮಾಡಬೇಕು, ಮಾಡಬಾರದು ಎಂದು ನಿಯಮ ಇಲ್ಲ. ನೀವು ನೀವಾಗಿ ಇರಿ. ನಿಮ್ಮನ್ನು ಪ್ರೀತಿಸುವವರನ್ನು ಕಂಡುಹಿಡಿಯಿರಿ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. ಇದನ್ನೂ ಓದಿ:  ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

ನೀನು ಒಳ್ಳೆಯ ಗುಣ-ನಡತೆಯಿರುವ ಹುಡುಗನೊಂದಿಗೆ ಡೇಟಿಂಗ್ ಮಾಡುವುದು ಸೂಕ್ತ ಎಂದು ಪಾಲಕರು ಸಲಹೆ ನೀಡಿದ್ದಾರೆ. ಬಾಲಿವುಡ್‍ನಲ್ಲಿ ಅಂಥ ಹುಡುಗರು ಸಿಗುವುದು ಕಷ್ಟ. ಅಷ್ಟೇ ಅಲ್ಲದೆ, ನಾನು ಒಬ್ಬ ಖ್ಯಾತನಾಮರೊಂದಿಗೆ ಡೇಟಿಂಗ್ ಮಾಡಿದ್ದೆ. ಆದರೆ ಈ ವಿಷಯ ಪ್ರಪಂಚಕ್ಕೆ ತಿಳಿದಿಲ್ಲ ಎಂದು ಸೋನಾಕ್ಷಿ ಸಿನ್ಹಾ ಅವರು ಆ ವ್ಯಕ್ತಿಯ ಹೆಸರು ಹೇಳದೇ ಮಾಹಿತಿ ಮಾತ್ರ ಹಂಚಿಕೊಂಡಿದ್ದಾರೆ. ಅವರು ಯಾರು ಎಂಬುದು ಮಾತ್ರ ಈಗ ಸೀಕ್ರೆಟ್ ಆಗಿ ಉಳಿದಿದೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

Comments

Leave a Reply

Your email address will not be published. Required fields are marked *