ರಸ್ತೆ ಅಪಘಾತದಲ್ಲಿ ಯುಪಿ ಉಪಮುಖ್ಯಮಂತ್ರಿ ಪುತ್ರನಿಗೆ ಗಾಯ

ಲಕ್ನೋ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಪುತ್ರ ಯೋಗೇಶ್ ಮೌರ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದು, ಗಾಯಗೊಂಡಿರುವ ಘಟನೆ ಜಲೌನ್‍ನ ಕಲ್ಪಿ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ದಾತಿಯಾದಲ್ಲಿರುವ ಪೀತಾಂಬರ ಪೀಠದಲ್ಲಿ ಪ್ರಾರ್ಥನೆ ಸಲ್ಲಿಸಲು ಯೋಗೇಶ್ ಮೌರ್ಯ ಅವರು ತಮ್ಮ ಮೂವರು ಸಹಚರರೊಂದಿಗೆ ತೆರಳಿದ್ದರು. ಈ ವೇಳೆ ಎಸ್‍ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಸದ್ಯ ಮೌರ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದ್ದು, ವೈದ್ಯರ ತಂಡವನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಲೌನ್ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ನಿರಂಜನ್ ಕೂಡ ಅತಿಥಿ ಗೃಹಕ್ಕೆ ತಲುಪಿ ಯೋಗೇಶ್ ಮೌರ್ಯ ಯೋಗಕ್ಷೇಮ ವಿಚಾರಿಸಿದರು, ಅಲ್ಲದೇ ಘಟನಾ ಸ್ಥಳದಿಂದ ಎಸ್‍ಯುವಿ ಕಾರನ್ನು ಕ್ರೇನ್ ಮೂಲಕ ರಸ್ತೆಯಿಂದ ತೆಗೆದುಹಾಕಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್

ಘಟನೆ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಶವ್ ಪ್ರಸಾದ್ ಮೌರ್ಯ ಅವರು, ಪೀತಾಂಬರ ಮಾತೆ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಮಗ ಯೋಗೇಶ್ ಕುಮಾರ್ ಮೌರ್ಯ ಸುರಕ್ಷಿತವಾಗಿದ್ದಾನೆ. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮತ್ತೊಮ್ಮೆ ಪೀತಾಂಬರ ದರ್ಶನಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *