ಭೋಪಾಲ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ದಾಟಿಯಾ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿದ್ದಾರೆ.
ಕುಟುಂಬವು 24 ವರ್ಷದ ಯುವಕನನ್ನು ಕೊಲೆ ಮಾಡಿತ್ತು. ಮೃತ ಯುವಕ ಮದ್ಯವ್ಯಸನಿಯಾಗಿದ್ದು, ತಾಯಿ, ಸಹೋದರಿ ಹಾಗೂ ಸಹೋದರ ಪತ್ನಿಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡುತ್ತಿದ್ದನು. ಇದರಿಂದ ಕುಟುಂಬ ಆತನನ್ನು ಕೊಲೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕುಟುಂಬದ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ 24 ವರ್ಷದ ಮಗ ಎಲ್ಲಿ ಎಂದು ನಾಲ್ವರನ್ನು ಪ್ರಶ್ನಿಸಿದ್ದೇವೆ. ಆಗ ಅವರು ನಡೆದ ಘಟನೆಯನ್ನು ವಿವರಿಸಿದರು ಎಂದು ಉಪ ವಿಭಾಗೀಯ ಅಧಿಕಾರಿ ಗೀತಾ ಭಾರದ್ವಾಜ್ ತಿಳಿಸಿದ್ದಾರೆ.

ನವೆಂಬರ್ 12ರಂದು ಗೋಪಾಲ್ ದಾಸ್ ಬೆಟ್ಟದಿಂದ ಯುವಕನ ಶವವನ್ನು ಹೊರತಂದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದೆ.
ಇತ್ತ ಕುಟುಂಬ ಕೂಡ ಮಗನ ಕೊಲೆಯನ್ನು ಒಪ್ಪಿಕೊಂಡಿದೆ. ಮಗ ವಿಪರೀತವಾಗಿ ಕುಡಿಯುತ್ತಿದ್ದನು. ಅಲ್ಲದೆ ತಾಯಿ, ಸಹೋದರಿ ಹಾಗೂ ಸಹೋದರನ ಪತ್ನಿಯ ಮೇಲೆ ಅತ್ಯಾಚಾರವೆಸಗುತ್ತಿದ್ದನು. ಇದರಿಂದ ಬೇಸತ್ತು ಆತನ ಕೊಲೆ ಮಾಡಿರುವುದಾಗಿ ಕುಟುಂಬ ತಪ್ಪೊಪ್ಪಿಕೊಂಡಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

ನವೆಂಬರ್ 11 ರಂದು ಮಗ ವಿಪರೀತ ಕುಡಿದುಕೊಂಡು ಮನೆಗೆ ಬಂದಿದ್ದಾನೆ. ಅಲ್ಲದೆ ಆತನ ಸಹೋದರನ ಪತ್ನಿಯನ್ನು ರೇಪ್ ಮಾಡಲು ಯತ್ನಿಸಿದನು. ಈ ಹಿಂದೆಯೂ ಆತ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಹೀಗಾಗಿ ಈ ಬಾರಿ ಆತನನ್ನು ಕೊಲೆ ಮಾಡುವುದಾಗಿ ತೀರ್ಮಾನ ಮಾಡಿ ಹತ್ಯೆ ಮಾಡಿದೆವು. ನಂತರ ಶವವನ್ನು ಗೋಪಾಲ್ ದಾಸ್ ಬೆಟ್ಟದಲ್ಲಿ ಎಸದೆವು ಎಂದು ಯುವಕನ ತಂದೆ ತಿಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ತಾಯಿ, ತಂದೆ, ಅಣ್ಣ ಹಾಗೂ ಅತ್ತಿಗೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply