ತಂದೆ ಸಾವಿನಿಂದ ಮನನೊಂದು ಮಗ ನೇಣಿಗೆ ಶರಣು

ಮಂಡ್ಯ: ತಂದೆಯ ಸಾವಿನಿಂದ ಮನನೊಂದು ಮಗನೂ ಕೂಡ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.

ತಂದೆ ಈರಣ್ಣ ಶೆಟ್ಟಿ(50) ಹಾಗೂ ಮಗ ಮಂಜು(25) ಮೃತಪಟ್ಟಿದ್ದಾರೆ. ಈರಣ್ಣ ಶೆಟ್ಟಿ ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ತಂದೆಯ ಸಾವಿನಿಂದ ಮನನೊಂದ ಮಗ ಮಂಜು ನೇಣಿಗೆ ಶರಣಾಗಿದ್ದಾನೆ.

ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜು ತನ್ನ ತಂದೆ ಈರಣ್ಣ ಶೆಟ್ಟರ ಮೆಡಿಕಲ್ ಬಿಲ್ ಕಟ್ಟಲು ಒಡವೆ ಅಡವಿಟ್ಟು 2 ಲಕ್ಷ ರೂ. ಸಾಲ ಮಾಡಿದ್ದ ಎಂದು ಹೇಳಲಾಗುತ್ತಿದೆ. ತಂದೆ ಸಾವಿನ ಸುದ್ದಿ ಕೇಳಿದ ಮಗ ಅವರನ್ನು ಉಳಿಸಿಕೊಳ್ಳಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸದ್ಯ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ, ಮಗನ ಸಾವಿನಿಂದ ಬೂಕನಕೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

 

Comments

Leave a Reply

Your email address will not be published. Required fields are marked *