ಹುಬ್ಬಳ್ಳಿ: ಮೀಟೂ ಅಭಿಯಾನವನ್ನು ಕೆಲವರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ.
ಮೀಟೂ ಅಭಿಯಾನವನ್ನು ಯಾರೂ ಪ್ರಚಾರದ ಗಿಮಿಕ್ ಆಗಿ ತೆಗೆದುಕೊಳ್ಳಬಾರದು. ಕೆಲವು ಘಟನೆಗಳನ್ನು ನೋಡಿದಾಗ ಇದನ್ನು ಪ್ರಚಾರಕ್ಕೆ ತೆಗೆದುಕೊಳ್ಳುತ್ತಿದ್ದಾರೆಂದು ತಿಳಿಯಲಾಗುತ್ತೆ. ಪ್ರಚಾರಕ್ಕೆ ಬೇರೆಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಯಾರು ಈ ರೀತಿಯ ತೊಂದರೆಗೆ ಒಳಗಾಗಿದ್ದಾರೋ ಅವರು ಮುಂದೆ ಬಂದು ಮಾತನಾಡಲಿ. ಚೇಂಜ್ ಮಾಡುವಂತಹ ಒಂದು ಆಂದೋಲನ ಪ್ರಾರಂಭವಾಗಿದೆ. ಮೀಟೂ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಒಂದು ಒಳ್ಳೆಯ ಉದ್ದೇಶದಿಂದ ಇಂಥ ಅಭಿಯಾನ ಆರಂಭಗೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗುತ್ತಾ ಬಂದಿದ್ದು ಸದ್ಯ ನಾನು ಇದೂವರೆಗೂ ಎಲ್ಲಿಯೂ ಈ ರೀತಿಯ ಶೋಷಣೆಗೆ ಒಳ್ಳಗಾಗಿಲ್ಲ. ನನಗೆ ನನ್ನದೇ ಆದ ಕೆಲಸದ ನಿಯಮಗಳಿವೆ. ಹಾಗಾಗಿ ಕೆಲಸ ಅಥವಾ ವೈಯಕ್ತಿಕ ಜೀವನಲ್ಲಿ ನಾನು ಯಾವುದೇ ಕಾರಣಕ್ಕೂ ಇಂತಹ ತೊಂದರೆಯನ್ನು ಫೇಸ್ ಮಾಡಲಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply