ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ

ನವದೆಹಲಿ: ರಾಷ್ಟ್ರರಾಜಧಾನಿಯ ಅಪ್ರತಿಮ ಹೆಗ್ಗುರುತಾಗಿರುವ ಇಂಡಿಯಾ ಗೇಟ್ ಹುಲ್ಲುಹಾಸಿನಲ್ಲಿ 50 ವರ್ಷಗಳಿಂದ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿಯ ಜ್ವಾಲೆಯು ಶಾಶ್ವತವಾಗಿ ನಂದಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ನಮ್ಮ ವೀರ ಸೈನಿಕರಿಗಾಗಿ ಉರಿಯುತ್ತಿದ್ದ ಅಮರ ಜ್ವಾಲೆ ಇಂದು ನಂದಿಸಲಾಗುತ್ತಿರುವುದು ಅತ್ಯಂತ ದುಃಖದ ಸಂಗತಿ. ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗವನ್ನು ಅರ್ಥವಾಗುವುದಿಲ್ಲ. ಆದರೂ ಪರವಾಗಿಲ್ಲ ನಾವು ಮತ್ತೊಮ್ಮೆ ನಮ್ಮ ಸೈನಿಕರಿಗಾಗಿ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

ಇಂಡಿಯಾ ಗೇಟ್‍ನಿಂದ 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ನಂದಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

1972ರ ಜನವರಿ 26 ರಂದು ಅಮರ್ ಜವಾನ್ ಜ್ಯೋತಿಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಉದ್ಘಾಟಿಸಿದ್ದರು. ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರ ಮತ್ತು ಹುತಾತ್ಮರ ಸ್ಮಾರಕವಾಗಿದೆ. ಸ್ಮಾರಕದಲ್ಲಿರುವ ಗ್ರಾನೈಟ್ ಫಲಕಗಳ ಮೇಲೆ 25,942 ಸೈನಿಕರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ.

Comments

Leave a Reply

Your email address will not be published. Required fields are marked *