ಸಿದ್ದರಾಮಯ್ಯ ತೀರ್ಮಾನ, ಹೇಳಿಕೆಗಳು ಅವರಿಗೆ ಶೋಭೆಯಲ್ಲ: ವಿ. ಸೋಮಣ್ಣ

ವಿಜಯಪುರ: ಇತ್ತೀಚೆಗೆ ಸಿದ್ದರಾಮಯ್ಯ ತೀರ್ಮಾನಗಳು, ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಇವರು ಹಳೆ ಸಿದ್ದರಾಮಯ್ಯನೋ, ಹೊಸ ಸಿದ್ದರಾಮಯ್ಯನೋ ತಿಳಿಯುತ್ತಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಜನರಿಗೆ ಒಂದು ಮನೆಯನ್ನು ಸರಿಯಾಗಿ ಹಂಚಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯವರಿಗೆ ಅಂಕಿ ಅಂಶಗಳನ್ನು ಸ್ವತಃ ನಾನೇ ಕಳುಹಿಸಿದ್ದೇನೆ. ಅವರ ಮತಕ್ಷೇತ್ರ ಬಾದಾಮಿ ಬಗ್ಗೆಯೂ ಕಳುಹಿಸಿದ್ದೇನೆ. ಈ ಹಿಂದೆ ರಾಜ್ಯದಲ್ಲಿ ಅವರು ಇದ್ದಂತಹ ಸಂದರ್ಭದಲ್ಲಿ 22 ಲಕ್ಷ ಮನೆಗಳನ್ನು ಚುನಾವಣೆ ಮುಂದಿಟ್ಟುಕೊಂಡು 35 ಸಾವಿರ ಕೋಟಿ ಬಜೆಟ್‍ನನ್ನು ಮಾರ್ಚ್‍ನಲ್ಲಿ ಮಾಡಿ, ಏಪ್ರಿಲ್‍ನಲ್ಲಿ ಚುನಾವಣೆ ಬಂದರು. ಬಳಿಕ ೨ ಸಾವಿರ ಕೋಟಿ ಇಟ್ಟರು. ಆದಾದ ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ  ಇದೆಲ್ಲಾವನ್ನು ನೋಡಿ ಬೇಸರಗೊಂಡು ಅವರ ಇತಿ ಮಿತಿಯಲ್ಲಿ ಒಂದು ಸಾವಿರ ಚಿಲ್ಲರೆ ಕೊಟ್ಟು ಕೈತೊಳೆದುಕೊಂಡರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

ನಮ್ಮ ಸರ್ಕಾರ ಬಂದ ಮೇಲೆ ಇದೆಲ್ಲವನ್ನು ಪರಿಶೀಲಿಸಿ 6 ಲಕ್ಷ 40 ಸಾವಿರ ಮನೆಗಳಿಗೆ ನಾಲ್ಕು ಸಾವಿರ ಕೋಟಿಗೂ ಅಧಿಕ ಹಣವನ್ನು ಬಿಡುಗಡೆ ಮಾಡಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಹೇಳುತ್ತಾರೆ. ನಾನು ಎಷ್ಟು ನೀಡಿದ್ದೇವೆ ಎಂಬ ಬಗ್ಗೆ ಮಾಹಿತಿ ಇದೆ. ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆ ಇದೆಯೋ ಇಲ್ವೋ ಗೊತ್ತಿಲ್ಲ. ಆದರೆ ಯಾರೋ ಹೇಳಿದರು ಅಂತಾ ಈ ರೀತಿ ಹೇಳುತ್ತಿದ್ದಾರೆ. ಇದು ಒಂದು ಹಿಟ್ ಆ್ಯಂಡ್ ರನ್ ಇದ್ದ ಹಾಗೆ, ಇದು ಆಗ ಬಾರದು ಎಂದಿದ್ದಾರೆ. ಇದನ್ನೂ ಓದಿ: ಮತಾಂತರ ಯತ್ನ ಪ್ರಕರಣ – ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ FIR ದಾಖಲು

ಇತ್ತೀಚೆಗೆ ಸಿದ್ದರಾಮಯ್ಯ ತೀರ್ಮಾನಗಳು, ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಇವರು ಹಳೆ ಸಿದ್ದರಾಮಯ್ಯನೋ, ಹೊಸ ಸಿದ್ದರಾಮಯ್ಯನೋ ತಿಳಿಯುತ್ತಿಲ್ಲ. ಸಿಎಂ ಬಗ್ಗೆ ಏನೇನೋ ಮಾತನಾಡುವುದು ಸರಿಯಲ್ಲ. ಇವರ ಬಗ್ಗೆ ಮಾತನಾಡಲೂ ಹೋದರೆ ಸಾಕಷ್ಟಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *