17 ಸೈನಿಕರು ಹುತಾತ್ಮ – ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ದ ನಕ್ಸಲರು

ರಾಯ್ಪುರ: ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ವಿರುದ್ಧ ಎನ್ ಕೌಂಟರ್ ಕಾರ್ಯಾಚರಣೆ ವೇಳೆ ಕಣ್ಮರೆಯಾಗಿದ್ದ 17 ಭದ್ರತಾ ಸಿಬ್ಬಂದಿಯ ಮೃತದೇಹಗಳು ಭಾನುವಾರ ಪತ್ತೆಯಾಗಿವೆ.

ಎನ್‍ಕೌಂಟರ್ ನಡೆದ ಒಂದು ದಿನದ ನಂತರ ಸುಕ್ಮಾದ ಮಿನ್ಪಾ ಕಾಡುಗಳಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 17 ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿದ್ದ ಸೈನಿಕರ ಹುಡುಕಾಟಕ್ಕಾಗಿ ಕಾಡಿನೊಳಗೆ ರಕ್ಷಣಾ ತಂಡವನ್ನು ಕಳುಹಿಸಲಾಗಿತ್ತು. ಇದೀಗ 17 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಡಿಎಂ ಅವಸ್ಥಿ ಹೇಳಿದ್ದಾರೆ.

ಚಿಂತಗುಫಾ ಪ್ರದೇಶದ ಕೊರಾಜ್‍ಗುಡ ಬೆಟ್ಟಗಳ ಬಳಿ ಶನಿವಾರ ಮಧ್ಯಾಹ್ನ 1 ಗಂಟೆ ನಕ್ಸಲ್ ವಿರುದ್ಧ ಎನ್‍ಕೌಂಟರ್ ಕಾರ್ಯಾಚರಣೆ ಶುರುವಾಗಿತ್ತು. ಆದರೆ ರಾತ್ರಿ 17 ಮಂದಿ ಸೈನಿಕರು ಕಾಡಿನಲ್ಲಿ ಕಣ್ಮರೆಯಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಇತರ 14 ಸಿಬ್ಬಂದಿ ಗಾಯಗೊಂಡಿದ್ದು, ಶನಿವಾರ ರಾತ್ರಿ ಚಿಕಿತ್ಸೆಗಾಗಿ ರಾಯ್ಪರಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುತಾತ್ಮರಾದ ಸೈನಿಕರ ಬಳಿಯಿದ್ದ 10 ಎಕೆ -47 ಸೇರಿದಂತೆ 15 ರೈಫಲ್‍ಗಳು ಕಾಣೆಯಾಗಿವೆ. ಅವುಗಳನ್ನು ನಕ್ಸಲರೇ ತೆಗೆದುಕೊಂಡು ಹೋಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್, ವಿಶೇಷ ಕಾರ್ಯಪಡೆ ಮತ್ತು ಕಮಾಂಡೋ ಬೆಟಾಲಿಯನ್ ಸೇರಿದಂತೆ 150 ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಅವಸ್ಥಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *