ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

ಇಂಫಾಲ್: ರಜೆಯಲ್ಲಿ ಮನೆಯಲ್ಲಿದ್ದ ಯೋಧನನ್ನು ಕಿಡ್ನ್ಯಾಪ್‌ ಮಾಡಿ ಹತ್ಯೆಗೈದಿರುವ ಘಟನೆ ಮಣಿಪುರದಲ್ಲಿ (Manipur) ನಡೆದಿದೆ. ಸೆರ್ಟೊ ತಂಗ್‌ತಾಂಗ್‌ ಕೋಮ್‌ ಹುತಾತ್ಮರಾದ ಯೋಧ.

ರಜೆ ಮೇಲಿದ್ದ ಇವರು ಇಂಫಾಲ್‌ ಪಶ್ಚಿಮ ಜಿಲ್ಲೆಯ ತಮ್ಮ ಮನೆಯಲ್ಲಿದ್ದರು. ಶನಿವಾರ ಅವರನ್ನು ಮನೆಯಿಂದ ಅಪಹರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಮನೆಯಿಂದ ಅಪರಿಚಿತ ಶಸ್ತ್ರಧಾರಿ ವ್ಯಕ್ತಿಗಳು ಅವರನ್ನು ಅಪಹರಿಸಿದ್ದರು. ಈ ವೇಳೆ ಯೋಧನ 10 ವರ್ಷದ ಪುತ್ರ ಕೂಡ ಮನೆಯಲ್ಲಿದ್ದ. ಮನೆಗೆ ನುಗ್ಗಿದ ಶಸ್ತ್ರಧಾರಿಗಳು ತನ್ನ ತಂದೆಯನ್ನು ಹೇಗೆ ಅಪಹರಿಸಿದರು ಎಂಬ ಬಗ್ಗೆ ಮಾಹಿತಿ ನೀಡಿದ್ದಾನೆ.

ಮೂವರು ಮನೆಗೆ ನುಗ್ಗಿ ನನ್ನ ತಂದೆಯನ್ನು ಎಳೆದೊಯ್ದರು. ಅವರು ನನ್ನ ತಂದೆಯ ತಲೆಯ ಮೇಲೆ ಪಿಸ್ತೂಲ್ ಇಟ್ಟು ಬಿಳಿಯ ವಾಹನಕ್ಕೆ ಬಲವಂತವಾಗಿ ಹತ್ತಿಸಿದರು ಎಂದು ಸಂತ್ರಸ್ತ ಯೋಧನ ಪುತ್ರ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

ಇಂಫಾಲ್ ಪೂರ್ವದ ಮೊಂಗ್‌ಜಾಮ್‌ನ ಪೂರ್ವದ ಖುನಿಂಗ್‌ಥೆಕ್ ಗ್ರಾಮದಲ್ಲಿ ಯೋಧನ ಮೃತದೇಹ ಪತ್ತೆಯಾಗಿದೆ. ಗುರುತನ್ನು ಯೋಧನ ಸಹೋದರ ಮತ್ತು ಸೋದರ ಮಾವ ದೃಢಪಡಿಸಿದರು. ಸೈನಿಕನ ತಲೆಯಲ್ಲಿ ಒಂದು ಗುಂಡೇಟು ಬಿದ್ದಿರುವ ಗುರುತಿದೆ.

ಸೆರ್ಟೊ ತಂಗ್‌ತಾಂಗ್ ಕೋಮ್ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ಬೆಂಬಲ ನೀಡುತ್ತೇವೆ ಎಂದು ಸೇನೆಯು ತಿಳಿಸಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]