ಪೇಜಾವರ ಶ್ರೀಗಳು ಮೋದಿ ಸರ್ಕಾರವನ್ನ ಟೀಕಿಸಿಲ್ಲ: ಸೊಗಡು ಶಿವಣ್ಣ

ತುಮಕೂರು: ಪೇಜಾವರ ಶ್ರೀಗಳು ಮೋದಿ ಸರ್ಕಾರ ಕುರಿತು ಸಲಹೆ ನೀಡಿದ್ದಾರೆಯೇ ಹೊರತು ಟೀಕೆ ಮಾಡಿಲ್ಲ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳು ಬೇಗನೇ ಜಾರಿ ಮಾಡುವಂತೆ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ. ಶ್ರೀಗಳ ಸಲಹೆಯನ್ನು ಟೀಕೆ ರೂಪದಲ್ಲಿ ಬಿಂಬಿಸಲಾಗುತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಪರಮ ಪೂಜ್ಯರ ಬಗ್ಗೆ ಮೋದಿಯವರಿಗೆ ಎಲ್ಲರಿಗಿಂತ ಹೆಚ್ಚಿನ ಗೌರವ ಇದೆ. ದೇಶ, ಧರ್ಮದ ಬಗ್ಗೆ, ಅನಾದಿಕಾಲದಿಂದ ಇದ್ದ ನಂಬಿಕೆ ಉಳಿಸಿ ಬೆಳೆಸಿಕೊಂಡು ಬಂದ ಮಹಾನುಭಾವರು ಪೇಜಾವರ ಶ್ರೀಗಳು, ಅಂಥವರ ಸಲಹೆಯನ್ನೇ ಟೀಕೆ ಎಂದು ಭ್ರಮಿಸಿ ತರಾವರಿ ಹೇಳಿಕೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶ್ರೀಮಠದ ಒಡನಾಡಿ ಕೆ.ಎಸ್.ಈಶ್ವರಪ್ಪನವರು ಕೇಂದ್ರ ಸರ್ಕಾರದ ಯೋಜನೆ ಕುರಿತು ಶ್ರೀಗಳಿಗೆ ಮಾಹಿತಿ ನೀಡಬೇಕಿತ್ತು. ಈ ಇಬ್ಬರೂ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಹಾಗಾಗಿ ಶ್ರೀಗಳು ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ಸೊಗಡು ಸಮರ್ಥಿಸಿಕೊಂಡಿದ್ದಾರೆ.

ಈ ಹಿಂದೆ ರಾಯಚೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಆರ್ಥಿಕತೆ ಸುಧಾರಣೆಯನ್ನು ಹೆಚ್ಚು ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅಲ್ಲದೇ ಶ್ರೀಮಂತರಿಗೂ ಭ್ರಷ್ಟಾಚಾರ ಮಾಡಲಾಗದಂತಹ ಸನ್ನಿವೇಶವನ್ನು ನಿರ್ಮಿಸಿದ್ದಾರೆ. ಆದರೆ ಅಚ್ಚೆದಿನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ಕಾರ್ಯವನ್ನು ಬೇಗ ಮಾಡಲಿ ಎಂಬ ಉದ್ದೇಶದಿಂದ ಹೇಳಿದ್ದಾಗಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *