ಕೆಲ್ಸದ ನಿಮಿತ್ತ ಬೆಂಗ್ಳೂರಿಗೆ ಬಂದ ಮಹಿಳಾ ಟೆಕ್ಕಿ – ಹೋಟೆಲ್ ರೂಮಿನಲ್ಲೇ ಅತ್ಯಾಚಾರ, ಕೊಲೆ

ಬೆಂಗಳೂರು: ಕಂಪನಿಯ ಕೆಲಸದ ನಿಮಿತ್ತ ಮಹಿಳಾ ಟೆಕ್ಕಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಕೆಲಸ ಮುಗಿಸಿ ತನ್ನ ಊರಿಗೆ ತೆರಳಬೇಕು ಅಂದುಕೊಂಡಿದ್ದ ಮಹಿಳೆಯನ್ನು ಹೋಟೆಲ್ ರೂಮ್ ನಲ್ಲಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೋಲಿಸರು ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಂಜಿತಾ ಮೃತ ದುರ್ದೈವಿ. ಮುಂಬೈ ಮೂಲದ ಈ ಮಹಿಳೆ ಕಳೆದ ವಾರ ಬೆಂಗಳೂರಿನ ಕಾಡುಗೋಡಿ ಸಮೀಪದ ಐಟಿಪಿಎಲ್ ರಸ್ತೆಯ ಕ್ರೈಸ್ಟ್ ಹೋಟೆಲ್ ಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಹೋಟೆಲ್ ನ 7ನೇ ಮಹಡಿಯಲ್ಲಿರುವ 701 ನೇ ನಂಬರ್ ರೂಮ್ ನಲ್ಲಿ ಕೊಲೆಯಾಗಿ ಹೋಗಿದ್ದರು.

ಈ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಗ ಅದೇ ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಣಿಪುರ ಮೂಲದ ಯಂಬಾ ಸಿಂಗ್ ವ್ಯಕ್ತಿ ಕಳೆದ ಫೆಬ್ರವರಿ 8 ರಂದು ಮಹಿಳೆ ತಂಗಿದ್ದ ರೂಮಿನಲ್ಲಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬಳಿಕ ಮಹಿಳೆ ಬಳಿ ಇದ್ದ ಒಪ್ಪೊ ಮತ್ತು ಆಪಲ್ ಐ ಫೋನ್‍ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದನೆಂದು ತಿಳಿದು ಬಂದಿದೆ ಎಂದು ಡಿಸಿಪಿ ಅಬ್ದುಲ್ ಅಹ್ಮದ್ ಹೇಳಿದ್ದಾರೆ.

ಕಂಪನಿಯ ಕೆಲಸದ ನಿಮಿತ್ತ ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯನ್ನು ಹೋಟೆಲ್ ರೂಮ್ ಒಂದರಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದರಿಂದ ಹೋಟೆಲ್ ಗಳು ಮಹಿಳೆಯರಿಗೆ ಸೇಫ್ ಅಲ್ವಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇನ್ನಾದರೂ ಹೋಟೆಲ್ ಸಿಬ್ಬಂದಿ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಕೊಂಚ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *