ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳೇ ಮಾಯ – ಕೇಂದ್ರ ಹಂಚಿದ ಪ್ರತಿಗಳು ಸೃಷ್ಟಿಸಿವೆ ಸಂಚಲನ

ನವದೆಹಲಿ: ದೇಶದಲ್ಲಿಗ ಸಂವಿಧಾನ (Constitution) ಸಂಘರ್ಷ ಶುರುವಾಗಿದೆ. ಹೊಸ ಸಂಸತ್ ಭವನ ಪ್ರವೇಶಿಸುವ ಸಂದರ್ಭದಲ್ಲಿ ಸಂಸದರಿಗೆ ಕೇಂದ್ರ ಸರ್ಕಾರ ಸಂವಿಧಾನ ಪ್ರತಿಗಳನ್ನು ನೀಡಿತ್ತು. ಆದರೆ ಸಂವಿಧಾನದ ಪೀಠಿಕೆಯಲ್ಲಿ ಸೋಷಿಯಲಿಸ್ಟ್, ಸೆಕ್ಯೂಲರ್ (Socialist, Secular) ಪದಗಳು ಇಲ್ಲದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಸೋನಿಯಾ ಗಾಂಧಿ (Sonia Gandhi) ಸೇರಿ ವಿಪಕ್ಷಗಳ ನಾಯಕರು ಇದು ಸಂವಿಧಾನದ ಮೇಲೆ ದಾಳಿ ಎಂದು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಕೇಂದ್ರದ ನಡೆ ಕಳವಳಕ್ಕೆ ಕಾರಣವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಸಂವಿಧಾನ ಪೀಠಿಕೆಯಲ್ಲಿ ಈ ಪದಗಳನ್ನು ತೆಗೆದಿರುವುದು ಘೋರ ಅಪರಾಧ ಎಂದು ಸಿಪಿಎಂ ಕಿಡಿಕಾರಿದೆ. ಒಮ್ಮೆ ತಿದ್ದುಪಡಿ ಮಾಡಿದ ನಂತರ ಹಳೆಯ ಪೀಠಿಕೆಯನ್ನು ಹೇಗೆ ಹಂಚಿದ್ದೀರಿ. ಹೀಗೆ ಮಾಡಬಾರದು ಎಂದು ಗೊತ್ತಿಲ್ವಾ ಎಂದು ಕೇಂದ್ರವನ್ನು ವಿಪಕ್ಷಗಳು ತರಾಟೆಗೆ ತಗೊಂಡಿವೆ.  ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

ಕೇಂದ್ರದ ನಡೆಯನ್ನು ಕಾನೂನು ಮಂತ್ರಿ ಸೇರಿ ಹಲವರು ಸಮರ್ಥನೆ ಮಾಡಿಕೊಂಡಿದ್ದಾರೆ. ನಾವು ಸಂವಿಧಾನ ಪೀಠಿಕೆಯ ಮೂಲಪ್ರತಿಯನ್ನು ನೀಡಿದ್ದೇವೆ. ಸಂವಿಧಾನ ಜಾರಿಯಾದ ಸಂದರ್ಭದಲ್ಲಿ ಈ ಪದಗಳು ಇರಲಿಲ್ಲ. 1976ರಲ್ಲಿ ಮಾಡಿದ 42ನೇ ತಿದ್ದುಪಡಿ ಮೂಲಕ ಇವುಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು ಎಂಬುದನ್ನು ಅರ್ಜುನ್ ರಾಮ್ ಮೇಘವಾಲ್ ನೆನಪಿಸಿದ್ದಾರೆ.

ಈ ಪ್ರಸ್ತಾವವನೆಯನ್ನು ಉದ್ದೇಶಪೂರ್ವಕವಾಗಿ ನೀಡಲಾಗಿದ್ಯಾ? ಅಥವಾ ಆಕಸ್ಮಿಕವಾಗಿ ನೀಡಲಾಗಿದ್ಯಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]