ಚಿನ್ನ ಕಳ್ಳತನ – ಸೋಷಿಯಲ್ ಮೀಡಿಯಾ ಸ್ಟಾರ್ ಅರೆಸ್ಟ್

ಬೆಂಗಳೂರು: ಗೋಲ್ಡ್ (Gold) ಕಳ್ಳತನ (Theft) ಮಾಡುತ್ತಿದ್ದ ಸೋಷಿಯಲ್ ಮೀಡಿಯಾ (Social Media) ಸ್ಟಾರ್‌ನನ್ನು ಬೆಂಗಳೂರಿನ (Bengaluru) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮುಂಬೈ (Mumbai) ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸಲೀಂ (ಸಾಹಿಲ್) ಬಂಧಿತ ಆರೋಪಿ. ಈತ ಒಂದು ವರ್ಷದ ಹಿಂದೆ 3.5 ಕೆಜಿಗೂ ಅಧಿಕ ಚಿನ್ನದ ಜೊತೆ ಸಿಕ್ಕಿ ಬಿದ್ದಿದ್ದು, ಬಸವನಗುಡಿ ಪೊಲೀಸರು ಅರೆಸ್ಟ್ (Arrest) ಮಾಡಿದ್ದರು. ಜೈಲಿನಿಂದ ಹೊರಬಂದ ಖದೀಮ ಮತ್ತೆ ಹಳೇ ಚಾಳಿಯನ್ನು ಮುಂದುವರೆಸಿದ್ದ. ಇದನ್ನೂ ಓದಿ: Umpire killed: ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ 

ಇದೀಗ ಮತ್ತೆ ಚಿನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದ ಈತನನ್ನು ಅಮೃತಹಳ್ಳಿ (Amruthahalli) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಒಂದು ಕೆಜಿಗೂ ಅಧಿಕ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: NIAಯಿಂದ ಸಾಕ್ಷಿ ಕೊರತೆ: ಭಟ್ಕಳ ಮೂಲದ ಉಗ್ರಗಾಮಿ ವಾಯಿದ್‌ಗೆ ಬಿಗ್ ರಿಲೀಫ್‌ ನೀಡಿದ ಕೋರ್ಟ್‌