ದುಬಾರಿ ಗಿಫ್ಟ್ ನೀಡೋದಾಗಿ ಮಹಿಳೆಗೆ 5.10 ಲಕ್ಷ ರೂ. ವಂಚಿಸಿದ ಸ್ನೇಹಿತ!

ಚಂಡೀಗಢ: ಮಹಿಳೆಗೆ ಫೇಸ್‍ಬುಕ್ ಸ್ನೇಹಿರೊಬ್ಬರು ಇಂಗ್ಲೆಂಡ್‍ನಿಂದ ದುಬಾರಿ ಉಡುಗೊರೆ ಕಳುಹಿಸುತ್ತೇನೆ ಎಂದು ನಂಬಿಸಿ 5.10 ಲಕ್ಷ ರೂ.ನ್ನು ವಂಚಿಸಿದ ಘಟನೆ ಲುಧಿಯಾನದಲ್ಲಿ ನಡೆದಿದೆ.

ಪ್ರಿಯಾ ಚೋಪ್ರಾ(36) ವಂಚಿತೆ ಹಾಗೂ ರಿಚೆಲ್ ರಿಚರ್ ಆರೋಪಿ. ಪ್ರಿತಾ ಬರೇವಾಲ್ ರಸ್ತೆಯ ಮಧುಬನ್ ಎನ್‍ಕ್ಲೇವ್‍ನಲ್ಲಿ ವಾಸಿಸುತ್ತಿದ್ದಾರೆ. 2020ರಲ್ಲಿ ಪ್ರಿಯಾ ಚೋಪ್ರಾಗೆ ಮಹಾರಾಷ್ಟ್ರದ ಪುಣೆಯ ರಿಚೆಲ್ ರಿಚರ್ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದರು. ರಿಚೆಲ್ ಅವರು ತಾನು ಇಂಗ್ಲೇಂಡ್‍ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡು ಸ್ನೇಹ ಬೆಳೆಸಿದ್ದ.

ಹೀಗೆ ದಿನ ಕಳೆದಂತೆ ಆತ ದುಬಾರಿ ಗಿಫ್ಟ್‍ನ್ನು ಇಂಗ್ಲೆಂಡ್‍ನಿಂದ ಕಳುಸುತ್ತಿದ್ದೇನೆ. ಆದರೆ ದೆಹಲಿಯ ಕಸ್ಟಮ್ ಇಲಾಖೆಯಲ್ಲಿ ಸಿಲುಕಿಕೊಂಡಿದೆ. ಕಸ್ಟಮ್ ಸುಂಕವನ್ನು ಪಾವತಿಸಿದ ನಂತರ ಅದನ್ನು ತೆಗೆದುಕೊಳ್ಳಬಹುದಾಗಿದೆ. ಈಗ ನೀವು ನೀಡಿ, ಆಮೇಲೆ ಎಲ್ಲಾ ಹಣವನ್ನು ವಾಪಸ್ ನೀಡುತ್ತೇನೆ ಎಂದು ನಂಬಿಸಿದ್ದಾನೆ.

ಇದೆಲ್ಲದರ ಮಧ್ಯೆ ಪ್ರಿಯಾಗೆ ಕಸ್ಟಮ್ ಇಲಾಖೆ ಅಧಿಕಾರಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯಿಂದ ಅನೇಕ ಬಾರಿ ಕರೆ ಬಂದಿದೆ. ಉಡುಗೋರೆಯನ್ನು ತೆಗೆದುಕೊಳ್ಳಲು 5.10ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೇ ಇಲಾಖೆಯೂ ರಿಚರ್ಡ್ ಹಾಗೂ ಪ್ರಿಯಾ ವಿರುದ್ಧ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಪ್ರಿಯಾ ಭಯಗೊಂಡು ಹಣವನ್ನು ಪಾವತಿಸುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ. ನಂತರ ಕರೆ ಮಾಡಿದವರು ನೀಡಿದ್ದ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದರು. ಇದನ್ನೂ ಓದಿ: ಮಕ್ಕಳ ಸ್ನೇಹಿಯಾಗಿ ಪ್ರಶ್ನೆ ಪತ್ರಿಕೆ ಇರಲಿದೆ: ಬಿಸಿ ನಾಗೇಶ್

ಇದಾದ ಬಳಿಕ ಪ್ರೀಯಾ ಎಷ್ಟೇ ಬಾರಿ ಪ್ರಯತ್ನಿಸಿದರೂ ರಿಚರ್ಡ್ ಕರೆ ಸ್ವೀಕರಿಸಲಿಲ್ಲ. ಜೊತೆ ಸಾಮಾಜಿಕ ಜಾಲತಾಣದಲ್ಲೂ ಆಕೆಯನ್ನು ನಿರ್ಬಂಧಿಸಿದ್ದಾನೆ. ಪ್ರಿಯಾ ಈ ಬಗ್ಗೆ ಸೈಬರ್ ಕ್ರೈಮ್ ಆರೋಪದಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಧರ್ಮ ಸಂಘರ್ಷದ ನಡುವೆ ಸಾಮರಸ್ಯದ ಬದುಕು- ಹಿಂದೂ ಸ್ನೇಹಿತನ ಕಷ್ಟಕ್ಕೆ ನೆರವಾದ ಮುಸ್ಲಿಂ ಗೆಳೆಯ

ಈ ಬಗ್ಗೆ ತನಿಖಾಧಿಕಾರಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅಮೃತಪಾಲ್ ಶರ್ಮಾ ಮಾತನಾಡಿ, ಸೈಬರ್ ಕ್ರೈಂ ಆರೋಪಿಗಳು ಬಳಸಿದ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಲಾಗಿದೆ. ಮಾಹಿತಿಯ ಆಧಾರದ ಮೇಲೆ, ರಿಚರ್ಡ್ ಮತ್ತು ಅವರ ಅಪರಿಚಿತ ಸಹಚರನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *