ಸೋಶಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಿ? ಗೊತ್ತಾಗಲ್ವಾ ನಿಮ್ಗೆ?-ಪೊಲೀಸರ ಕ್ಲಾಸ್

-ಬಸ್‍ಗಳಿಂದ ಉದ್ಯೋಗಿಗಳನ್ನ ಕೆಳಗಿಳಿಸಿದ ಪೊಲೀಸರು

ಬೆಂಗಳೂರು: ಇಂದಿನಿಂದ ಕೆಲ ವಲಯಗಳಿಗೆ ಲಾಕ್‍ಡೌನ್‍ನಿಂದ ವಿನಾಯ್ತಿ ನೀಡಲಾಗಿದೆ. ಖಾಸಗಿ ಕಂಪನಿಗಳು ತಮ್ಮ ಸಿಬ್ಬಂದಿ ಕರೆ ತರಲು ಬಸ್ ವ್ಯವಸ್ಥೆ ಮಾಡಿವೆ. ಆದ್ರೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಿಬ್ಬಂದಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ನಾಗಸಂದ್ರದ ಚೆಕ್‍ಪೋಸ್ಟ್ ಬಳಿ ಖಾಸಗಿ ವಾಹನಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಖಾಸಗಿ ಕಂಪನಿಯ ಟಿಟಿ ವ್ಯಾನ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕುಳಿತವರನ್ನು ನೋಡಿದ ಪೊಲೀಸರು ಕ್ಲಾಸ್ ತೆಗೆದುಕೊಂಡರು. ಕುರಿಗಳು ಹೋದ ಹಾಗೆ ಹೋಗ್ತಿದ್ದೀರಿ ಅಲ್ವಾ, ಟಿವಿ, ಪೇಪರ್ ಗಳಲ್ಲಿ ನೋಡಿಲ್ವಾ? ಸೋಶಿಯಲ್ ಡಿಸ್ಟನ್ಸ್ ಕಾಪಾಡಿಕೊಳ್ಳಿ ಎಂದು ಎಲ್ಲರೂ ಹೇಳ್ತಿರೋದು ನಿಮಗೆ ಕೇಳಿಸಲ್ವಾ? ಒಂದು ಬದಿಯ ಸೀಟ್ ನಲ್ಲಿ ಒಬ್ಬರೇ ಕುಳಿತುಕೊಳ್ಳಬೇಕು ನಿಯಮಗಳಿದ್ರೂ ಜೊತೆ ಜೊತೆಯಾಗಿ ಕುಳಿತಿದ್ದೀರಿ ಎಂದು ಪೊಲೀಸರು ಗದರಿದ್ರು.

ಟಿಟಿ ವಾಹನದಲ್ಲಿ ಹೆಚ್ಚುವರಿಯಾಗಿ ಕುಳಿತಿದ್ದ ಸಿಬ್ಬಂದಿಯನ್ನು ಕೆಳಗಿಳಿಸಿದ ಪೊಲೀಸರು ವಾಹನವನ್ನ ಹೋಗಲು ಅವಕಾಶ ನೀಡಿದರು. ಮತ್ತೊಂದು ಸಾರಿ ಬಂದು ಉಳಿದ ಸಿಬ್ಬಂದಿಯನ್ನು ಕರೆದುಕೊಂಡು ಹೋಗಬೇಕು. ನಾಳೆಯೂ ಇದೇ ರೀತಿ ಸಾಮಾಜಿಕ ಅಂತರವಿಲ್ಲದೇ ಸಿಬ್ಬಂದಿಯನ್ನು ಕರೆ ತಂದ್ರೆ ವಾಹನವನ್ನು ಸೀಜ್ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *