ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲದಂತೆ ಜನ ನೋಡಿಕೊಳ್ಬೇಕು: ಎಸ್.ಆರ್.ಹಿರೇಮಠ

ರಾಯಚೂರು: ಮಹಾಭ್ರಷ್ಟ ಜನಾರ್ದನ ರೆಡ್ಡಿ ಮತ್ತೆ ಜನಪ್ರತಿನಿಧಿಯಾಗಬಾರದು, ಚುನಾವಣೆ ಎದುರಿಸಿದರೆ ಜನರೇ ತಕ್ಕ ಪಾಠ ಕಲಿಸಬೇಕು ಅಂತ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ ಜನಾರ್ದನ ರೆಡ್ಡಿ ಭ್ರಷ್ಟಾಚಾರ ಮಾಡಿದ ಹಣವನ್ನ ಹಿಂಪಡೆಯುವ ಕೆಲಸ ಇನ್ನೂ ಆಗಿಲ್ಲ. ರೆಡ್ಡಿಯ 40 ಸಾವಿರ ಕೋಟಿ ರೂಪಾಯಿ ಅಕ್ರಮ ಸಂಪಾದನೆ ಹಣ ವಾಪಸ್ ಬರಬೇಕು. ಅದರ ಬಗ್ಗೆ ಸರ್ಕಾರ, ಜನ ತಲೆಕೆಡಿಸಿಕೊಂಡಿಲ್ಲ, ಕೇಸ್‍ಗಳು ಸರಿಯಾಗಿ ನಡೆಯುತ್ತಿಲ್ಲ. ಭ್ರಷ್ಟ, ಅನೈತಿಕ ವ್ಯಕ್ತಿಗೆ ಜನರೇ ಪಾಠ ಕಲಿಸಬೇಕು. ಇರುವ ಒಂದು ಜೀವನವನ್ನ ಸಾರ್ಥಕತೆ ಕಡೆ ಒಯ್ಯುವ ಕೆಲಸವನ್ನ ಜನಾರ್ದನ ರೆಡ್ಡಿ ಮಾಡಬೇಕು ಎಂದರು. ಇದನ್ನೂ ಓದಿ: ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು

ಇನ್ನೂ ಮಾರ್ಚ್ 1 ರಿಂದ ರಾಜ್ಯ ಸರ್ಕಾರದ 3 ಕರಾಳ ಕಾಯ್ದೆ ವಾಪಸ್ ಹಾಗೂ ಎಂಎಸ್‍ಪಿಗೆ ಲೀಗಲ್ ಗ್ಯಾರೆಂಟಿಗಾಗಿ ಜನಾಂದೋಲನ ಮಹಾ ಮೃತ್ರಿಯಿಂದ ಯಾತ್ರೆ ನಡೆಸುವುದಾಗಿ ಹೇಳಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಪಿಎಂಸಿ ತಿದ್ದು ಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು, ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು. ಈ ಮೂರು ವಿಚಾರಗಳನ್ನು ಸರ್ಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಯಾತ್ರೆ ನಡೆಸುವುದಾಗಿ ಎಸ್.ಆರ್.ಹಿರೇಮಠ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *