ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿ

ಬೆಂಗಳೂರು: ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದೆ. ಅದಕ್ಕೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಯಕರಾಗಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಹಲಾಲ್ ಮತು ಜಟ್ಕಾ ವಿಚಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭಾರತದಲ್ಲಿ ಆಹಾರ ಸಂಸ್ಕøತಿ ಮೊದಲು ಇದ್ದಿದ್ದು ಜಟ್ಕಾ ಕಟ್. ಮಾಂಸವನ್ನು ಕತ್ತರಿಸಿ ಮಾಂಸವನ್ನು ತಿನ್ನುವುದು. ಈ ಬಗ್ಗೆ ಕ್ಷತ್ರೀಯರು ಯುದ್ಧದ ಕಾಲದಲ್ಲಿ ಮಹಾಭಾರತ, ರಾಮಾಯಣದಲ್ಲಿಯೂ ಉಲ್ಲೇಖವಾಗಿದೆ. ಅನೇಕ ರಾಜ-ಮಹಾರಾಜರೂ ಸಹ ಈ ರೀತಿಯ ಬೇಟೆಯಾಡುತ್ತಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

ನಾನು ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುತ್ತೇನೆ. ಅವರು ಕಾಲಭೈರವೇಶ್ವರನ ಮೇಲೆ ಹಣೆ ಮಾಡಿ ಅವರು ಎಲ್ಲಿಂದ ಆಹಾರ ತಂದಿದ್ದಾರೆ ಎಂದು ಹೇಳಲಿ ಎಂದು ಸವಾಲನ್ನು ಹಾಕಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕೂಸ್ಕರ ಅವರು ಹಲಾಲ್ ತೆಗೆದುಕೊಂಡು ಬಂದಿದ್ದಾರೆ. ಈ ಮೂಲಕ ಅವರು ತಮಗೆ ಬರುತ್ತಿದ್ದ 10% ವೋಟ್‍ನಲ್ಲಿ 40% ಅಗುತ್ತೆ ಎಂದು ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

ಈಗ ನಮ್ಮ ದೇಶದಲ್ಲಿ ಹೊಸದೊಂದು ಧರ್ಮ ಪ್ರಾರಂಭವಾಗಿದೆ. ಅದೇ ಆಂಟಿ ಹಿಂದೂ ಧರ್ಮ. ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದೆ. ಅದರ ನಾಯಕರು ಕುಮಾರಸ್ಟಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ. ಅದಕ್ಕೆ ಅವರ ವಿರುದ್ಧ ನಮ್ಮ ಧಿಕ್ಕಾರವಿದೆ ಎಂದು ಆಕ್ರೋಶ ಹೊರಹಾಕಿದರು.

ಹಲಾಲ್ ಕಟ್ ಪದ್ಧತಿಯನ್ನು ಮರುಭೂಮಿಯಿಂದ ಬಂದ ಅನ್ಯಧರ್ಮದ ಜನರು ನಮ್ಮ ಮೇಲೆ ಏರಿದ್ದಾರೆ. ಅನೇಕ ಹಿಂದೂಗಳು ಮಾಂಸದಂಗಡಿಯನ್ನು ನಡೆಸುತ್ತಿದ್ದು, ಅನೇಕ ಮುಸ್ಲಿಮರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಅವರು ಟೋಪಿ ಹಾಕಿಕೊಂಡೆ ಹಲಾಲ್ ಮಿಟ್ ರೆಡಿ ಮಾಡುತ್ತಾರೆ. ಅದಕ್ಕೆ ಅವರಿಗೆ ದುಡ್ಡನ್ನು ಕೊಡಲಾಗುತ್ತೆ. ಅಂತಹವರನ್ನು ನಾನು ತುಂಬಾ ನೋಡಿದ್ದೇನೆ ಎಂದು ವಿರೋಧ ವ್ಯಕ್ತಪಡಿಸಿದರು.

ಹಿಂದೂಗಳೇ ಕುರಿಗಳನ್ನು ಬೆಳೆಸಿ ಅವನೇ ಮಾಂಸವನ್ನು ಮಾರಬೇಕು. ಅವನೇ 360 ಡಿಗ್ರಿಯಲ್ಲಿ ಎಲ್ಲ ಕೆಲಸವನ್ನು ಮಾಡಬೇಕು. ನನ್ನ ಹಿಂದೂ ಅಣ್ಣತಮ್ಮದರಿಗೆ ಈ ಮೂಲಕ ಉದ್ಯೋಗ ಸಂಪೂರ್ಣ ಸಿಗಬೇಕು. ಇದು ಯಾವ ಜಾತಿ-ಧರ್ಮದ ವಿರುದ್ಧವಲ್ಲ. ರಾಜಕೀಯದ ಗಿಮಿಕ್ ಇಲ್ಲದೇ ನಮ್ಮ ಹಿಂದೂ ಧರ್ಮದ ಹಕ್ಕನ್ನ, ಹಿಂದೂ ಯುವಕರ ಹಕ್ಕನ್ನ ಯಾರು ಕಿತ್ತುಕೊಂಡಿದ್ದಾರೆ ಅವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರತಿಯೊಂದು ವ್ಯವಹಾರವನ್ನು ನಾವೇ ಹಿಟ್ಟುಕೊಳ್ಳಬೇಕು ಎಂಬ ಮುಸ್ಲಿಮರ ಹೇಳಿಕೆ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಹಲವು ವರ್ಷಗಳ ಹೋರಾಟ ಇಂದು ಬಯಲಿಗೆ ಬಂದಿದೆ. ಹಲಾಲ್ ಮತ್ತು ಜಟ್ಕಾ ಕಟ್ ಬಗ್ಗೆ ಈಗ ವಿಶ್ವವೇ ಮಾತನಾಡುತ್ತಿದೆ ಎಂದರು.

ಜಟ್ಕಾ ಎಂಬುದು ಹಿಂದೂ ಧರ್ಮ ಮಾಡುವ ಪದ್ಧತಿ, ಹಲಾಲ್ ಮುಸ್ಲಿಮರು ಮಾಡುವ ಪದ್ಧತಿ ಎಂಬುದು ಈಗ ಜನರಿಗೆ ತಿಳಿದುಬಂದಿದೆ. ಈ ಅಭಿಯಾನ ಹಿಂದೂಗಳು ಮಾಡುವ ಬೀಗರೂಟ ಮತ್ತು ಪ್ರತಿ ಭಾನುವಾರ ಹಿಂದೂ ಮಾಡುವ ಮಾಂಸಡೂಟಕ್ಕೆ ನಮ್ಮ ಸಾಂಪ್ರದಾಯದ ಜಟ್ಕಾ ಕಟ್ ಪದ್ದತಿಯನ್ನು ಸಂಪೂರ್ಣವಾಗಿ ಅಳವಾಡಿಸಿಕೊಳ್ಳುವವರಿಗೂ ಈ ಅಭಿಯಾನ ಮುಂದುವರಿಯುತ್ತೆ ಎಂದು ತಿಳಿಸಿದರು.

ಇದು ಶಾಶ್ವತವಾದ ಅಭಿಮಾನವಾಗಿದೆ. ನಾವು ಈಗ ಮಗುವಾಗಿದ್ದು, ಮುಂದೆ ಓಡುತ್ತೇವೆ. ಗೌಡ, ಒಕ್ಕಲಿಗ, ಕುಮಾರ್ ಎಂದು ಕ್ಷತ್ರೀಯರ ಹೆಸರನ್ನು ಇಟ್ಟುಕೊಂಡು ಹಲಾಲ್ ಮಾಡುವುದನ್ನು ನಿಲ್ಲಿಸಬೇಕು. ಹಿಂದೂ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಮರು ಟೋಪಿ ಹಾಕಿಕೊಂಡು ಪ್ರಾಣಿಗಳನ್ನು ಕಟ್ ಮಾಡಿ ‘ಅಲ್ಲಾ’ ಹೆಸರು ಹೇಳಿ ಅವರ ದೇವರಿಗೆ ಅರ್ಪಣೆ ಮಾಡುತ್ತಿರುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

ಈ ಪದ್ದತಿಯನ್ನು ತಡೆಯಲು ನಾವು ಹಿಂದೂ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಹಿಂದೂ ಸಂಘಗಳ ಬಳಿಗೆ ಹೋಗಿ ಮನವಿ ಮಾಡುತ್ತೇವೆ. ಇಲ್ಲವಾದರೆ ಗ್ರಾಹಕರಿಗೆ ಜಟ್ಕಾ ಮತ್ತು ಹಲಾಲ್ ಎಂದು ಎರಡು ಆಯ್ಕೆಗಳನ್ನು ಕೊಡಿ. ನಾವು ಯಾವುದೇ ಜಾತಿ, ಧರ್ಮದ ವಿರುದ್ಧ ಮಾಡುತ್ತಿರುವ ಹೋರಾಟವಲ್ಲ. ಇದು ಗ್ರಾಹಕರ ಹಕ್ಕಿನ ವಿರುದ್ಧ ಮಾಡುತ್ತಿರುವ ಹೋರಾಟವಾಗಿದೆ ಎಂದರು.

Comments

Leave a Reply

Your email address will not be published. Required fields are marked *